Breaking
23 Mar 2026, Mon

ಕಾರಿಂಜ ಉರುವಾಲು ದೇವಸ್ಥಾನ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದಿಂದ ₹2.5 ಲಕ್ಷ ಅನುದಾನ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಾರಿಂಜ ಉರುವಾಲು ಗ್ರಾಮದಲ್ಲಿರುವ ಶ್ರೀವನಶಾಸ್ತಾರ ಮತ್ತು ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾದಿಕಾರಿಗಳಾದ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ ರೂ 2.5 ಲಕ್ಷ ಮೊತ್ತದ ಡಿ .ಡಿ ಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ.ಟ್ರಸ್ಟ್ ( ರಿ) ಗುರುವಾಯನಕೆರೆ ಯೋಜನಾ ಕಚೇರಿಯ ಯೋಜನಾಧಿಕಾರಿಗಳಾದ ಅಶೋಕ್ , ದೇವಸ್ಥಾನದ ಅಡಳಿತ ಕಮಿಟಿ ,ಹಾಗೂ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಮಿಟಿಯ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಅದ್ಯಕ್ಷರು ಹಾಗೂ ಸರ್ವಪದಾದಿಕಾರಿಗಳ ಸಮಕ್ಷಮದಲ್ಲಿ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಕಣಿಯೂರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಲಯ ಮೇಲ್ವಿಚಾರಕರಾದ ಶಿಲ್ಪಾ ನಾಯಕ್ , ಸಮಿತಿಯ ಅದ್ಯಕ್ಷರುಗಳು, ಪದಾದಿಕಾರಿಗಳು ಹಾಗೂ ಊರ ಭಕ್ತರು ಉಪಸ್ಥಿತರಿದ್ದರು.

    Leave a Reply

    Your email address will not be published. Required fields are marked *