ಬಂಟ್ವಾಳ: ನಿತ್ಯಾನಂದ ನಗರ ಶ್ರೀ ನಿತ್ಯಾನಂದ ಗೋವಿಂದ ಸ್ವಾಮಿ ಭಜನಾ ಮಂದಿರದಲ್ಲಿ 32ನೇ ವರ್ಷದ ಆರಾಧನಾ ಮಹೋತ್ಸವ ಮತ್ತು ಸಂತಾನ ಗೋಪಾಲಕೃಷ್ಣ ಜಪ, ಹವನ ಹಾಗೂ 53 ನೇ ಭಜನಾ ಮಂಗಲೋತ್ಸವ ಕಾರ್ಯಕ್ರಮವು ಜ.20 ರಿಂದ 25ರ ತನಕ ನಡೆಯಲಿದೆ.

ಕಾರ್ಯಕ್ರಮದಲ್ಲಿ ಪ್ರತಿದಿನ ಭಜನೆ ಮತ್ತು ಮಹಾಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ಬಿ. ದಿನೇಶ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



