Breaking
25 Sep 2026, Fri

ಏತ ನೀರಾವರಿ ಬಳಕೆದಾರರ ಸಂಘದ ಸಭೆ ಹಾಗೂ ನೀರಾವರಿ ವ್ಯವಸ್ಥೆ ವಿಸ್ತರಣೆಗೆ ಬೇಡಿಕೆ

ಬಂಟ್ವಾಳ: ಸಜಿಪಮುನ್ನೂರು ಗ್ರಾಮದ ಮಡಿವಾಳಪಡ್ಪು ನೇತ್ರಾವತಿ ನದಿ ಕಿನಾರೆಯಲ್ಲಿ ಅನುಷ್ಠಾನಗೊಂಡಿರುವ ಏತ ನೀರಾವರಿ ಯೋಜನೆಯ ಮೂಲಕ ಕೆಲವೊಂದು ಸೀಮಿತ ಪ್ರದೇಶಕ್ಕೆ ಮಾತ್ರ ನೀರು ಪೂರೈಕೆಯಾಗುತ್ತಿದ್ದು, ಇದನ್ನು ಸ್ಥಳೀಯ ಹೆಚ್ಚಿನ ಪ್ರದೇಶಗಳಿಗೆ ವಿಸ್ತರಿಸಲು ಹೈ ಸ್ಪೀಡ್ ಪಂಪ್ ಅಳವಡಿಕೆ ಮತ್ತು ಹೊಸ ಪೈಪ್ ಲೈನ್ ಅಳವಡಿಸುವಂತೆ ಏತ ನೀರಾವರಿ ಬಳಕೆದಾರರ ಸಂಘದ ವತಿಯಿಂದ ಮಾಜಿ ಸಚಿವ ಬಿ. ರಮಾನಾಥ ರೈ ಅವರಿಗೆ ಜ. 19 ರಂದು ಮನವಿ ಸಲ್ಲಿಸಲಾಯಿತು.

ಮಡಿವಾಳಪಡ್ಪು ಕೂಸನಕಟ್ಟೆ ಪಂಪ್ ಹೌಸ್ ಬಳಿ ನಡೆದ ಸಮಿತಿ ಸಭೆಯಲ್ಲಿ ಮಾಜಿ ಸಚಿವ ಬಿ. ರಮನಾಥ ರೈ ಪಾಲ್ಗೊಂಡು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಹೇಶ್ ನಾಯಕ್, ಕಾರ್ಯದರ್ಶಿ ಶ್ರೀನಿವಾಸ್, ಜಿ.ಪಂ. ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯಶಂಕರ್ ಬಾಸ್ರಿತ್ತಾಯ, ಗ್ರಾ.ಪಂ. ಮಾಜಿ ಅಧ್ಯಕ್ಷ ಯೂಸುಫ್ ಕರಂದಾಡಿ, ಪ್ರಮುಖರಾದ ಪರಮೇಶ್ವರ ಎಂ, ಧನಂಜಯ ಶೆಟ್ಟಿ ಪರಾರಿ, ಹರೀಶ್ ಗಟ್ಟಿ, ಕೃಷ್ಣಪ್ಪ ಮಡಿವಾಳ ಪಡ್ಪು, ಭೋಜ ಮೂಲ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *