ವಿಟ್ಲ : ವಿಟ್ಲ ಸಮೀಪದ ಮಂಗಳಪದವು ಮಾಮೇಶ್ವರದಲ್ಲಿ ವಿಷಭರಿತ ಹಾವು ಕಚ್ಚಿ ಪೆರುವಾಯಿ ಮೂಲಕ ಯುವಕ ಸಾವನ್ನಪ್ಪಿದ್ದಾರೆ.
ಪೆರುವಾಯಿಯ ಸುರೇಶ್ ನಾಯ್ಕ ಸಾವನ್ನಪ್ಪಿದ ಯುವಕ. ಮಾಮೇಶ್ವರದಲ್ಲಿ ಗೆಳೆಯನ ಮನೆಯಲ್ಲಿ ವಾಸವಿದ್ದ ಸುರೇಶ್ . ಕುಡಿತದ ಚಟ ಹೊಂದಿದ್ದು, ಪೆರುವಾಯಿಯಲ್ಲಿರುವ ತನ್ನ ಮನೆಗೆ ಆತ ಹೋಗುತ್ತಿರಲಿಲ್ಲ. ಮಾಮೇಶ್ವರದ ಪಕ್ಕದ ಮನೆಯಲ್ಲಿ ಹಾವು ಹಾವು ಎಂದು ಕೂಗಿದ ಸ್ವರ ಕೇಳಿದ ಈತ ಹಾವನ್ನು ಕೈಯಲ್ಲಿ ಹಿಡಿದಿದ್ದಾನೆ. ಆಗ ಅದು ಕಚ್ಚಿದ್ದರೂ ಸಹ, ಚಿಕಿತ್ಸೆ ಮಾಡದೇ ಕಂಠಪೂರ್ತಿ ಕುಡಿದು ಮಲಗಿದ್ದಾನೆ. ಮಲಗಿದಲ್ಲೇ ರವಿವಾರ ರಾತ್ರಿ ಸಾವನ್ನಪ್ಪಿದ್ದಾನೆ.