ವಿಟ್ಲ: ಹಾಡಹಗಲೇ ಮನೆಯ ಹಿಂಬಾಗಿಲು ಮುರಿದು ಮನೆಯ ಕಪಾಟಿನೊಳಗಿದ್ದ ಲಕ್ಷಾಂತರ ಮೌಲ್ಯದ ಚಿನ್ನ ದೋಚಿದ ಘಟನೆ ವಿಟ್ಲದ ಮಂಕುಡೆ ಕಲ್ಕಾಜೆ ಗಣೇಶ್ ಶೆಟ್ಟಿ ಎಂಬವರ ಮನೆಯಲ್ಲಿ ನಡೆದಿದೆ.
ಗಣೇಶ್ ಶೆಟ್ಟಿ ಯವರ ಪತ್ನಿ ಪೇಟೆಗೆ ಹೋಗಿದ್ದ ಸಂದರ್ಭ ಖದೀಮರು ಕೈಚಳಕ ತೋರಿಸಿದ್ದಾರೆ. ಹಿಂಬದಿ ಬಾಗಿಲನ್ನು ಮುರಿದು ಮನೆಯ ಕಪಾಟಿನಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.