Breaking
23 Dec 2024, Mon

ವಿವೇಕ ಕೊಠಡಿ ಹಾಗೂ ಎಂ.ಆರ್.ಪಿ.ಎಲ್ ಅನುದಾನದ ತರಗತಿ ಕೊಠಡಿಗಳ ಉದ್ಘಾಟಿಸಿದ ಶಾಸಕ ಅಶೋಕ್ ರೈ

ವಿಟ್ಲ: ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ(RMSA)ವಿಟ್ಲ ಇಲ್ಲಿ ಜಿಲ್ಲಾ ಪಂಚಾಯತ್ ಅನುದಾನದ ವಿವೇಕ ಕೊಠಡಿ ಹಾಗೂ ಎಂ.ಆರ್.ಪಿ. ಎಲ್ ಅನುದಾನದಲ್ಲಿ ನಿರ್ಮಾಣಗೊಂಡ ತರಗತಿ ಕೊಠಡಿಗಳನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹಾಗೂ ಎಂ.ಆರ್ ಪಿ.ಎಲ್ ಸೀನಿಯರ್ ಮ್ಯಾನೇಜರ್ ಇನ್ ಮಾರ್ಕೆಟಿಂಗ್ ನ ದಯಾನಂದ ಪ್ರಭು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಎಂಆರ್.ಪಿ.ಎಲ್ ನ ಸೀನಿಯರ್ ಮ್ಯಾನೇಜರ್ ದಯಾನಂದ ಪ್ರಭು. ಪಂಚಾಯತ್ ರಾಜ್ ಮಂಗಳೂರು ಇದರ ಇಂಜಿನೀಯರ್ ನಾಗೇಶ್, ಇಂಜಿನೀಯರ್ ರಾಘವೇಂದ್ರ ಪ್ರಭು, ವಿವೇಕ ಕೊಠಡಿಯ ಕಂಟ್ರಾಕ್ಟರ್ ಅಬ್ದುಲ್ ಶಕೀಲ್ ಇವರನ್ನು ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯತ್ ನ ಅಧ್ಯಕ್ಷರಾದ ಕರುಣಾಕರ ಗೌಡ ನಾಯ್ಗೊಟ್ಟು ವಹಿಸಿದ್ದರು. ಪಟ್ಟಣಪಂಚಾಯತ್ ಉಪಾಧ್ಯಕ್ಷರಾದ ಸಂಗೀತ ಪಾಣೆಮಜಲು. ಪಟ್ಟಣ ಪಂಚಾಯತ್ ಕೌನ್ಸಿಲರ್ ರವಿಪ್ರಕಾಶ್ ವಿಟ್ಟ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಎಂ ಎಸ್ ಮಹಮ್ಮದ್, ಬಂಟ್ಟಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಜುನಾಥನ್ ಎಂ.ಜಿ, ವಿಟ್ಲ ಸಮೂಹ ನಂಪನ್ಮೂಲ ವ್ಯಕ್ತಿ ಬಿಂದು ಬಿ.ಜೆ. ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ ಎಸ್.ಡಿ.ಎಂ.ಸಿ ಅಧ್ಯಕ್ಷರುಗಳಾದ ರವಿಶಂಕರ ಶಾಸ್ತ್ರೀ, ರಶ್ಮಿ ಹರೀಶ್, ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ ಎಸ್.ಡಿ.ಎಂ.ಸಿ ಸದಸ್ಯರು ಉಪಸ್ಥಿತರಿದ್ದರು.

ಪ್ರೌಢಶಾಲಾ ಮುಖ್ಯ ಶಿಕ್ಷಕಿ ಫೆಲ್ಸಿಟಾ ಈವಾ ಗಲ್ಬಾವೊ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಕೆ. ವಂದಿಸಿದರು. ಪ್ರೌಢಶಾಲಾ ಸಹಶಿಕ್ಷಕರಾದ ಸದಾಶಿವ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *