Breaking
22 Mar 2026, Sun

ಪಣಂಬೂರು ಕಡಲ ಕಿನಾರೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಮಂಗಳೂರು: ಅಪರಿಚಿತ ವ್ಯಕ್ತಿಯೋರ್ವರ ಮೃತದೇಹವು ಪಣಂಬೂರು ಕಡಲ ಕಿನಾರೆ ಬ್ರೇಕ್ ವಾಟರ್ ಸಮೀಪದ ಸಮುದ್ರದ ದಡದಲ್ಲಿ ಇಂದು (ಜ. 17) ಪತ್ತೆಯಾಗಿದೆ.

ಅಪರಿಚಿತ ಮೃತ ವ್ಯಕ್ತಿಯು 55-60 ವರ್ಷದವರಾಗಿದ್ದು ವಾರಸುದಾರರು ಪತ್ತೆಯಾಗದ ಕಾರಣ ಶವವನ್ನು ಸರ್ಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಅಪರಿಚಿತ ಮೃತ ವ್ಯಕ್ತಿಯು ಸುಮಾರು 5.5 ಅಡಿ ಎತ್ತರವಿದ್ದು ದೃಢಕಾಯ ಶರೀರ, 3 ಇಂಚು ಉದ್ದ ಬಿಳಿ ತಲೆ ಕೂದಲು ಹಾಗೂ ಬಿಳಿ ಬಣ್ಣದ ಗಡ್ಡ ಹೊಂದಿರುತ್ತಾರೆ.

ಈ ವ್ಯಕ್ತಿಯ ಕುರಿತು ಮಾಹಿತಿ ದೊರೆತಲ್ಲಿ ಪಣಂಬೂರು ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *