Breaking
24 Jun 2026, Wed

ಏಕಾಂಗಿಯಾಗಿ ವಾಸಿಸುತ್ತಿದ್ದ ವೃದ್ಧೆಯ ಶವ ಪತ್ತೆ

ಬದಿಯಡ್ಕ: ಕುಂಬಾಜೆ ಮವ್ವಾರು ಗೋಸಾಡದ ಅಜಿಲದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ, ವೃದ್ದೆಯೊಬ್ಬರ ಮೃತದೇಹವು ಮನೆಯ ಅಡುಗೆ ಕೋಣೆಯ ಸಮೀಪ ಪತ್ತೆಯಾಗಿದೆ.

ಮೃತರನ್ನು ಪುಷ್ಪಾವತಿ (70) ಎಂದು ಗುರುತಿಸಲಾಗಿದೆ.

ಕುತ್ತಿಗೆ ಮತ್ತು ಮುಖದಲ್ಲಿ ಗಾಯಗಳಾಗಿದ್ದು ಮನೆಯೊಳಗೆ ಹೊಡೆದಾಟ ನಡೆದಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಕತ್ತಿನಲ್ಲಿದ್ದ ಕರಿಮಣಿ ಸರ ಕೂಡ ನಾಪತ್ತೆಯಾಗಿದ್ದು, ಕಳವು ನಡೆದಿರಬೇಕೆಂದು ಪೊಲೀಸರು ಅನುಮಾನ ಪಟ್ಟಿದ್ದಾರೆ.

ಅಡುಗೆ ಕೋಣೆಯ ಬಾಗಿಲು ತೆರೆದ ಸ್ಥಿತಿಯಲ್ಲಿದ್ದ ಕಾರಣ ಕಳವು ಮಾಡುವ ಸಂದರ್ಭದಲ್ಲಿ ಕೊಲೆ ಮಾಡಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.

Leave a Reply

Your email address will not be published. Required fields are marked *