Breaking
24 Jun 2026, Wed

ಸಜೀಪ ಶ್ರೀ ಉಳ್ಳಾಲ್ತಿ ದೈವಸ್ಥಾನದ ಪುದ್ದರ್ ಮೆಚ್ಚಿ ಜಾತ್ರೆಗೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ದೈವಾರಾಧನೆಯಲ್ಲಿ ವಿಶೇಷ ಸ್ಥಾನಮಾನ ಹೊಂದಿರುವ ಸಜೀಪ ಮಾಗಣೆಯ ಶ್ರೀ ಉಳ್ಳಾಳ್ತಿ ದೈವಕ್ಕೆ ವರ್ಷಕ್ಕೊಂದಾವರ್ತಿ ಮಕರ ಸಂಕ್ರಮಣದಂದು ನಡೆಯುವ ಪುದ್ದರ್ ಮೆಚ್ಚಿ ಜಾತ್ರೆಯ ಸಂದರ್ಭದಲ್ಲಿ ಬಂಟ್ವಾಳ ಶಾಸಕ ಉಳ್ಳಿಪಾಡಿ ಗುತ್ತು ರಾಜೇಶ್ ನಾಯ್ಕ್ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಕಾಂತಾಡಿ ಗುತ್ತು ಗಡಿ ಪ್ರಧಾನರಾದ ಉಗ್ಗ ಶೆಟ್ಟಿಯಾನೆ ಗಣೇಶ್ ನಾಯಕ್, ಸಜೀಪ ಗುತ್ತು ಗಡಿ ಪ್ರಧಾನರಾದ ಮುತ್ತಣ್ಣ ಶೆಟ್ಟಿಯಾನೆ ಕಾಳಪ್ಪ ಶೆಟ್ಟಿ, ಮಾಡತಾರು ಗುತ್ತು ಗಡಿ ಪ್ರಧಾನರಾದ ಶಶಿಧರ ರೈ ಯಾನೆ ನಾರಣ ಆಳ್ವ, ನಗ್ರೀ ಗುತ್ತು ಜಯರಾಮ ಶೆಟ್ಟಿ, ನಗ್ರೀಗುತ್ತು ವಿವೇಕ ಶೆಟ್ಟಿ, ಎಸ್ .ಶ್ರೀಕಾಂತ್ ಶೆಟ್ಟಿ , ರವೀಂದ್ರ ಕಂಬಳಿ, ದೇವಿ ಪ್ರಸಾದ್ ಪೂಂಜ ಶಿವಪ್ರಸಾದ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *