Breaking
24 Jun 2026, Wed

ಏಕಾಏಕಿ ಕುಸಿದು ಬಿದ್ದು ದೇವರ ಉತ್ಸವಕ್ಕೆ ಕರೆತರಲಾಗಿದ್ದ ಆನೆ ಮೃತ್ಯು

ಮಲಪ್ಪುರಂ: ದೇವರ ಉತ್ಸವಕ್ಕೆ ಕರೆತರಲಾಗಿದ್ದ ಆನೆಯೊಂದು ಏಕಾಏಕಿ ಕುಸಿದು ಬಿದ್ದು ಸಾವನಪ್ಪಿದ ಘಟನೆ ಮಲಪ್ಪುರಂ ಜಿಲ್ಲೆಯ ವಲ್ಲಿಕ್ಕುನ್ನು ಪ್ರದೇಶದಲ್ಲಿ ನಡೆದಿದೆ.

ವಲ್ಲಿಕ್ಕುನ್ನು ಅಯ್ಯಪ್ಪ ದೇವಸ್ಥಾನದ ಉತ್ಸವಕ್ಕಾಗಿ ಬಾಲುಸ್ಸೇರಿ ಗಜೇಂದ್ರನ್ ಎಂಬ ಆನೆಯನ್ನು ಕರೆತರಲಾಗಿತ್ತು. ಉತ್ಸವದ ಪೂರ್ವಸಿದ್ಧತೆಯ ವೇಳೆ ಆನೆಗೆ ಸ್ನಾನ ಮಾಡಿಸುವಾಗ ಅದು ಅಚಾನಕ್ ಕುಸಿದು ಬಿದ್ದಿದೆ. ತಕ್ಷಣ ಪಶುವೈದ್ಯರು ಚಿಕಿತ್ಸೆ ನೀಡಿದರೂ, ಅದಾಗಲೇ ಆನೆ ಸಾವನಪ್ಪಿರುವುದು ದೃಢಪಟ್ಟಿದೆ.

ಆನೆಯ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಯ ಕುರಿತು ಅರಣ್ಯ ಇಲಾಖೆ ತನಿಖೆ ಕೈಗೊಂಡಿದ್ದು, ಅಗತ್ಯ ಕ್ರಮಗಳ ಬಳಿಕ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *