Breaking
24 Jun 2026, Wed

ದೀಪ ಹಚ್ಚುವ ವೇಳೆ ಬೆಂಕಿ ತಗುಲಿ ವೃದ್ಧೆ ಸಾವು

ಉಡುಪಿ : ಬೈಂದೂರು ತಾಲೂಕಿನ ಉಪ್ಪುಂದದಲ್ಲಿ ವೃದ್ಧೆಯೊಬ್ಬರು ದೇವರಿಗೆ ದೀಪ ಹಚ್ಚುವ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮೃತಪಟ್ಟಿರುವ ಘಟನೆ ಜ. 12ರಂದು ನಡೆದಿದೆ.

ಮೃತಪಟ್ಟ ವೃದ್ಧೆಯನ್ನು ಉಪ್ಪುಂದ ಗ್ರಾಮದ ಪೇಟೆಯ ನಿವಾಸಿ ಶೋಭಾ (69) ಎಂದು ಗುರುತಿಸಲಾಗಿದೆ.

ಮಗ ಮತ್ತು ಸೊಸೆಯೊಂದಿಗೆ ವಾಸವಾಗಿದ್ದ ಇವರು ಜ. 5ರಂದು ಸಂಜೆ ದೇವರಿಗೆ ದೀಪ ಹಚ್ಚುವ ವೇಳೆ ಆಕಸ್ಮಿಕವಾಗಿ ಉಡುಪಿಗೆ ಬೆಂಕಿ ತಗುಲಿ ದೇಹದ ಬಹು ಭಾಗ ಸುಟ್ಟು ಗಾಯಗಳಾಗಿದ್ದವು. ತಕ್ಷಣವೇ ಅವರನ್ನು ಮಂಗಳೂರಿನ ವೆಸ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *