Breaking
22 Mar 2026, Sun

ಕೂಟ ಮಹಾ ಜಗತ್ತು ಬಂಟ್ವಾಳ ಅಂಗ ಸಂಸ್ಥೆಯ 18 ನೇ ಸಂಪರ್ಕ ಸಭೆ

ಬಂಟ್ವಾಳ: ಕೂಟ ಮಹಾ ಜಗತ್ತು ಬಂಟ್ವಾಳ ಅಂಗ ಸಂಸ್ಥೆಯ 18ನೇ ಸಂಪರ್ಕ ಸಭೆಯೂ ಜಯಶಂಕರ ಬಾಸ್ರಿತಾಯ ಅವರ ಸಜೀಪ ಮುನ್ನೂರಿನ ಗ್ರಾಮದಲ್ಲಿ ನಡೆಯಿತು.

ಕೂಟ ಮಹಾ ಜಗತ್ತು ಬಂಟ್ವಾಳ ಅಂಗ ಸಮಿತಿ ಅಧ್ಯಕ್ಷ ಕೆ ರಮೇಶ್ ಹೊಳ್ಳ ಅಧ್ಯಕ್ಷತೆಯಲ್ಲಿ ಜರುಗಿದ್ದು ಸಭೆಯಲ್ಲಿ ವೇದಮೂರ್ತಿ ಶಿವರಾಮ ಮೈಯ್ಯ ಫೆ. 01 ರಂದು ಬಂಟ್ವಾಳ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ನರಸಿಂಹ ಹೋಮ ಬಗ್ಗೆ ಮಾಹಿತಿ ನೀಡಿದರು.

ಸಜೀಪಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ನಿವೃತ್ತ ನೌಕಾದಳ ಕಮಾಂಡರ್ ವಸಂತ ರಾವ್, ಕೂಟ ಮಹಾಜಗತ್ತು ಮಂಗಳೂರು ಅಂಗ ಸಮಸ್ತೆ ಪ್ರತಿನಿಧಿ ರವಿರಾಜ್, ಕೂಟಮಹ ಜಗತ್ತು ಮಹಿಳಾ ವೇದಿಕೆ ಅಧ್ಯಕ್ಷ ಯಮುನಾ ಐಗಳು, ಕಾರ್ಯದರ್ಶಿ ರಾಮಕೃಷ್ಣರಾವ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಜ. 18 ರಂದು ನಡೆಯುವ ವಾರ್ಷಿಕ ಕ್ರೀಡಾಕೂಟ ನಡೆಸಲು ತೀರ್ಮಾನಿಸಲಾಯಿತು. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮೊಡಂಕಾಪು ನಲ್ಕೇ ಮಾರು ನಿವಾಸಿ ರತ್ನಮ್ಮ ಅವರ ದುಸ್ಥಿತಿಯಲ್ಲಿರುವ ಮನೆಯ ಬದಲಿಗೆ ನೂತನ ಮನೆ ನಿರ್ಮಿಸಿ ಕೊಡಲು ತೀರ್ಮಾನಿಸಲಾಯಿತು. ಈ ವೇಳೆ ಕೂಟ ಮಹಾ ಜಗತ್ತು ಕೇಂದ್ರ ಸಮಿತಿಗೆ ಶಾಂತರಾಮ ರಾವ್ ಅವರನ್ನು ಬಂಟ್ವಾಳ ಪ್ರತಿನಿಧಿಯಾಗಿ ಆರಿಸಲಾಯಿತು.

ಬಿಲಿಯನ್ ಫೌಂಡೇಶನ್ ವತಿಯಿಂದ ವಿತರಿಸಲಾದ ವಿದ್ಯಾರ್ಥಿ ವೇತನದ ಮಾಹಿತಿಯನ್ನು ಸಭೆಗೆ ನೀಡಿದರು. ಎ ರವಿಶಂಕರ ಮಯ್ಯ ಕಾರ್ಯಕ್ರಮ ನಿರೂಪಿಸಿದರು. ವೇದಾನಂದ ಕಾರಂತ ಧನ್ಯವಾದ ನೀಡಿದರು. ಸಾಮೂಹಿಕ ನಾಮ ಸಂಕೀರ್ತನೆ ವಿಷ್ಣು ಸಹಸ್ರನಾಮ ಪಾರಾಯಣ ಲಕ್ಷ್ಮಿ ನರಸಿಂಹ ಅಷ್ಟೋತ್ತರ ಶತನಾಮಾವಳಿ ಪಠಣ ಗುರು ನರಸಿಂಹ ಮಂತ್ರ ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

Leave a Reply

Your email address will not be published. Required fields are marked *