Breaking
23 Mar 2026, Mon

ಸಿಂಪಲ್ ಸ್ಟಾರ್ ಖ್ಯಾತಿಯ ಸ್ಯಾಂಡಲ್ ವುಡ್ ನ ನಟ ರಕ್ಷಿತ್ ಶೆಟ್ಟಿ ಕುಟುಂಬದ ನೇಮೋತ್ಸವದಲ್ಲಿ ಭಾಗಿ

ಉಡುಪಿ: ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ಖ್ಯಾತಿಯ ರಕ್ಷಿತ್ ಶೆಟ್ಟಿ ಉಡುಪಿ ಅಲೆವೂರಿನ ಕಲ್ಯಾಣ ನಗರದಲ್ಲಿ ನಡೆದ ವೈದ್ಯನಾಥ ಬಬ್ಬು ಸ್ವಾಮಿ ದೈವದ ನೇಮೋತ್ಸವದಲ್ಲಿ ಕುಟುಂಬ ಸಮೇತರಾಗಿ ಭಾಗಿಯಾಗಿದ್ದಾರೆ.

ಈ ನೇಮೋತ್ಸವದ ವೇಳೆ ದೈವವು ‘ಚಿಂತೆ ಬೇಡ ನಾನು ನಿನ್ನ ಹಿಂದಿದ್ದೇನೆ’ ಎಂಬ ಅಭಯವನ್ನೂ ನೀಡಿದೆ ಎನ್ನಲಾಗಿದೆ.

ಅಲೆವೂರು ದೊಡ್ಡಮನೆ ಮನೆತನದವರು ನಿರ್ವಹಿಸುವ ಈ ನೇಮೋತ್ಸವದಲ್ಲಿ ಕುಟುಂಬದ ಕುಡಿಯಾಗಿರುವ ರಕ್ಷಿತ್ ಶೆಟ್ಟಿ ಎಲ್ಲಿದ್ದರೂ, ಇಲ್ಲಿನ ನೇಮೋತ್ಸವಕ್ಕೆ ಬರುತ್ತಾರೆ. ಅದರಂತೆ ಈ ವರ್ಷನೂ ಬಂದಿದ್ದಾರೆ.

ಕೊನೆಯ ಬಾರಿ ರಕ್ಷಿತ್ ಶೆಟ್ಟಿ’ ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆದಾದ ಬಳಿಕ ಅವರು ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ. ಸದ್ಯ ರಕ್ಷಿತ್ ಅವರು ರಿಚರ್ಡ್ ಆಂಟನಿ’ ಚಿತ್ರ ಸ್ಟ್ರಿಪ್ಟ್ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.

Leave a Reply

Your email address will not be published. Required fields are marked *