Breaking
21 Jun 2026, Sun

ಶಾಲಾ ಮಕ್ಕಳಿದ್ದ ರಿಕ್ಷಾ ಪಲ್ಟಿ : ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ಬಂಟ್ವಾಳ : ಆಟೋ ರಿಕ್ಷಾವೊಂದು ಚಾಲಕ‌ನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಹೊಂಡಕ್ಕೆ ಉರುಳಿದ ಘಟನೆ ಅಲ್ಲಿಪಾದೆ ಸಮೀಪದ ಉಜಿರಾಡಿಯಲ್ಲಿ ನಡೆದಿದೆ.

ಶಾಲೆಯಿಂದ ವಿದ್ಯಾರ್ಥಿಗಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾಗ ಘಟನೆ ನಡೆದಿದ್ದು, ಘಟನೆಯಲ್ಲಿ ಆಟೋ ರಿಕ್ಷಾ ಚಾಲಕ, ಪೆರಿಯಪಾದೆ ನಿವಾಸಿ ಸಂಶುದ್ದೀನ್ ಹಾಗೂ ಇತರ ನಾಲ್ಕೈದು ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *