ಬಂಟ್ವಾಳ: ಮಂಗಳೂರಿನಿಂದ ಪುತ್ತೂರು ಕಡೆಗೆ ಸಂಚರಿಸುತ್ತಿದ್ದ ಬಸ್‌ನ ಬ್ರೇಕ್ ವೈಫಲ್ಯಗೊಂಡ ಘಟನೆ ಬಂಟ್ವಾಳದ ಬಿ.ಸಿ.ರೋಡ್‌ನಲ್ಲಿ ಜ.9 ರಂದು ನಡೆದಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸದೇ ಭಾರೀ ಅನಾಹುತ ತಪ್ಪಿದೆ.

ಬಿ.ಸಿ.ರೋಡಿನ ಫ್ಲೈಓವರ್ ಅಡಿಯಲ್ಲಿ ಬಸ್‌ನ ಬ್ರೇಕ್ ಕಾರ್ಯನಿರ್ವಹಿಸದೇ ಅಡ್ಡಾದಿಡ್ಡಿಯಾಗಿ ಸಂಚರಿಸಿದ್ದು, ಈ ವೇಳೆ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಬಳಿಕ ನಿಂತಿದೆ. ಅಪಘಾತದ ಕ್ಷಣದಲ್ಲಿ ಸ್ಕೂಟರ್ ಸವಾರ ವಾಹನದಿಂದ ಕೆಳಗೆ ಹಾರಿದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ಪರಿಣಾಮವಾಗಿ ಕೆಲ ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ನಂತರ ಪೊಲೀಸರು ಹಾಗೂ ಸಾರ್ವಜನಿಕರ ಸಹಕಾರದಿಂದ ಸಂಚಾರವನ್ನು ಸರಾಗಗೊಳಿಸಲಾಯಿತು.




