Breaking
22 Mar 2026, Sun

ಜ.14 ರಂದು ಅಳದಂಗಡಿಯ ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನಕ್ಕೆ 80 ಕೆಜಿ ತೂಕದ ಘಂಟೆ ಸಮರ್ಪಣೆ

ಬೆಳ್ತಂಗಡಿ: ತಾಲೂಕಿನ ಶಿರ್ಲಾಲುವಿನ ಅಳದಂಗಡಿಯಲ್ಲಿರುವ ಕಾರಣೀಕ ದೈವ ಕ್ಷೇತ್ರವಾದ ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನದ ಸನ್ನಿಧಿಗೆ 80 ಕೆಜಿ ತೂಕದ ಘಂಟೆ ಸಮರ್ಪಣೆಯಾಗಲಿದೆ.

ಸತ್ಯದೇವತಾ ಕ್ಷೇತ್ರದ ಬಗ್ಗೆ ಅಪಾರ ಭಯಭಕ್ತಿ ಹೊಂದಿರುವ ದೋರಿಂಜೆ ಅಮಣಿ ಮಂಜು ದೇವಾಡಿಗ ಮತ್ತು ಮಕ್ಕಳು ಈ ಘಂಟೆಯನ್ನು ಸಮರ್ಪಸಲಿದ್ದಾರೆ.

ಕಳೆದ 13 ವರ್ಷಗಳಿಂದ ಈ ಕುಟುಂಬ ತಾಯಿ ಸತ್ಯ ದೇವತೆಗೆ ನಿರಂತರವಾಗಿ ವರ್ಷದಲ್ಲಿ ಎರಡು ಸಲ ನೇಮೋತ್ಸವ ನಡೆಸುತ್ತ ಬರುತ್ತಿದೆ. ಮಂಜು ದೇವಾಡಿಗರವರು ಕೂಡ ಪೂರ್ಣ ಪ್ರಮಾಣದ ಸೇವೆ ಸಲ್ಲಿಸುತ್ತಿದ್ದರು.

ಜನವರಿ 14 ರಂದು ದೈವ ಕ್ಷೇತ್ರದಲ್ಲಿ ಘಂಟಾ ಗೋಪುರದ ಸಮರ್ಪಣಾ ಕಾರ್ಯಕ್ರಮ ನಡೆಯಲಿದ್ದು ಮಾಜಿ ಮುಖ್ಯಮಂತ್ರಿಗಳಾದ ಎಂ.ವೀರಪ್ಪ ಮೊಯ್ಲಿ ಆಗಮಿಸಿ ಉದ್ಘಾಟಿಸಲಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ದೀಪ ಪ್ರಜ್ವಲನೆಯನ್ನು ನೇರವೇರಿಸಲಿದ್ದಾರೆ. ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮುಂಬಯಿ ವಿಶ್ವ ದೇವಾಡಿಗ ಮಹಾಮಂಡಲ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ಧಾರ್ಮಿಕ ಮುಖಂಡ ಕಿರಣ್ಚಂದ್ರ ಡಿ ಪುಷ್ಪಗಿರಿ, ರಾಜ್ಯ ಧಾರ್ಮಿಕ ಸದಸ್ಯ ಮಲ್ಲಿಕಾ ಪಕ್ಕಳ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ಕುಮಾರ್ ಕೆ.ಎಸ್, ಮಲ್ಲಿಕಾ ಮತ್ತು ನಾರಾಯಣ ದೇವಾಡಿಗ ದುಬೈ, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಶೈಲಜ ಮತ್ತು ಸುರೇಶ್ ದೇವಾಡಿಗ ದುಬೈ ಭಾಗವಹಿಸಲಿದ್ದಾರೆ.

ಬೆಳಿಗ್ಗೆ ಗಂಟೆ 9.30ರಿಂದ ಅಮಣಿ ಮಂಜು ನಿವಾಸದಿಂದ ಮೆರವಣಿಗೆ ಮೂಲಕ ಘಂಟೆಯನ್ನು ತರಲಾಗುತ್ತಿದ್ದು ಇದರ ಉದ್ಘಾಟನೆಯನ್ನು ಶ್ರೀಮತಿ ಅಮಣಿ ಮಂಜು ದೇವಾಡಿಗರವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಯಶಸ್ವಿಗೆ ಈಗಾಗಲೇ ಕ್ಷೇತ್ರದ ಆಡಳಿತದಾರ ಶಿವಪ್ರಸಾದ್ ಅಜಿಲರು ಪೂರ್ವಸಿದ್ದತೆ, ಸಮಾರಂಭದ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಸೇವಾಕರ್ತರಾದ ಶ್ರೀಮತಿ ಮತ್ತು ಶೀತಲ್ ಜೈದೀಪ್ ದೇವಾಡಿಗ, ಶ್ರೀಮತಿ ಕಲ್ಪನಾ ಮತ್ತು ಪುಷ್ಪರಾಜ ದೇವಾಡಿಗ ಅವರು ವಿವಿಧ ಸಿದ್ದತೆಗಳನ್ನು ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *