ಸುಳ್ಯ: ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಪಂದ್ಯಾಟದಲ್ಲಿ ಬಂಟ್ವಾಳ ಎಸ್. ವಿ. ಎಸ್. ದೇವಳ ಆಂಗ್ಲ ಮಾಧ್ಯಮ ಶಾಲೆಯ 39 ವಿದ್ಯಾರ್ಥಿಗಳು ಭಾಗವಹಿಸಿ, ಕಟಾ ಹಾಗೂ ಕುಮಿಟೆ ಕಲರ್ ಬೆಲ್ಟ್ ವಿಭಾಗದಲ್ಲಿ 18 ಚಿನ್ನ, 13 ಬೆಳ್ಳಿ, 7 ಕಂಚಿನ ಪದಕಗಳನ್ನು ಗಳಿಸಿ ಅಧಿಕ ಅಂಕ ಪಡೆದು ತಂಡ ಪ್ರಶಸ್ತಿಯನ್ನು ಪಡೆದಿದ್ದಾರೆ.

ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶಿವಾನಂದ ಬಾಳಿಗ, ಮುಖ್ಯೋಪಾಧ್ಯಾಯಿನಿ ರೋಶನಿ ತಾರಾ ಡಿಸೋಜ, ಉಪ ಮುಖ್ಯೋಪಾಧ್ಯಾಯಿನಿ ಜಾನಕಿ ರಾಜೇಶ್, ಕರಾಟೆ ಉಸ್ತುವಾರಿಗಳಾದ ಭವ್ಯ, ಯಜ್ಞಶ್ರೀ, ಕರಾಟೆ ತರಬೇತುದಾರರಾದ ಸೆನ್‌ಸಾಯಿ ಜೆರಾಲ್ಡ್ ಫೆರ್ನಾಂಡಿಸ್ ಪೆದಮಲೆ ವಿಜೇತರಾದ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.




