Breaking
10 May 2026, Sun

ಫೇಸ್ಬುಕ್ ನಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರ ಭಾವಚಿತ್ರಕ್ಕೆ ಶ್ರದ್ಧಾಂಜಲಿ, ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಂಘದ ಉಪಾಧ್ಯಕ್ಷ ಶ್ರೀನಿವಾಸ್ ಕಾರ್ಲ ಆಕ್ರೋಶ

ಸುಳ್ಯ: ಫೇಸ್ಬುಕ್ ನಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಹಾಕಿರುವ ಬಿಲ್ಲವ ಸಂದೇಶ್ ಎಂಬಾತನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಂಘದ ಉಪಾಧ್ಯಕ್ಷರಾದ ಶ್ರೀನಿವಾಸ್ ಕಾರ್ಲ ಆಕ್ರೋಶ ವ್ಯಕ್ತಪಡಿಸಿದ್ದು ದಲಿತ ಸಮುದಾಯದ ಅದರಲ್ಲು ಯಾವುದೇ ರಾಜಕಾರಣದ ಹಿನ್ನಲೆ ಇಲ್ಲದೆ ಅತ್ಯಂತ ಕಡು ಕುಟುಂಬದಲ್ಲಿ ಹುಟ್ಟಿ ಯಾವುದೇ ಹಗರಣ ಮಾಡದೆ ತಾವಾಯ್ತು ತಮ್ಮ ಕೆಲಸವಾಯ್ತು ಅಂತ ಇರುವ ಸುಳ್ಯದ ಬಿಜೆಪಿಯ ದಲಿತ ಕುಟುಂಬದಿಂದ ಬಂದ ಶಾಸಕಿ ಭಾಗಿರತಿ ಮುರುಳ್ಯರವರನ್ನು ಜೀವಂತ ಇರುವಾಗಲೆ ಅವರು ಸತ್ತುಹೋಗಿದ್ದಾರೆ ಅಂತ ಟ್ರೋಲ್ ಮಾಡಿ ಶ್ರದ್ಧಾಂಜಲಿ ಸಲಿಸಿರುವುದು ಆತನ ವಿಕೃತ ಮನಸ್ಸಿನ ಪರಮಾವಧಿ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *