ಕಾರ್ಕಳ : ದಲಿತ ಸಮಾಜಕ್ಕೆ ಅವಮಾನ ಮಾಡುವ ದೃಷ್ಠಿ ಇಂದ ಬಿಲ್ಲವ ಸಂದೇಶ ಅವರು ಹಾಕಿದ ಹೇಳಿಕೆಯನ್ನು ತೀರ್ವವಾಗಿ ಖoಡಿಸುತ್ತೇನೆ. ಅವರು ನಿಮ್ಮಂತೆ ಮನುಷ್ಯರೇ, ಆ ಸಮಾಜದ ಹೆಣ್ಣು ಮಗಳು ಇಂದು ಶಾಸಕಿ ಆಗಿರೋದು ಎಲ್ಲಾ ಮಹಿಳೆಯರಿಗೆ ಸ್ಕಂದ ಗೌರವ ಹೀಗಿರುವಾಗ ನಿಮ್ಮ ರಾಜಕೀಯ ತೆವಲಿಗೆ ದಲಿತ ಸಮಾಜದ ಹೆಣ್ಣು ಮಗಳನ್ನು ಕೀಳು ಭಾವನೆಯಲ್ಲಿ ಬಿಂಬಿಸುವದಲ್ಲದೆ ರಾಷ್ಟ್ರೀಯ ಪಕ್ಷಕ್ಕೆ ಅವಮಾನ ಮಾಡಬೇಡಿ.

ಈ ಕೂಡಲೇ ಕ್ಷಮೆ ಕೇಳದಿದ್ದರೆ ದಲಿತ ಸಂಘಟನೆಯನ್ನು, ಮಹಿಳಾ ಸಂಘಟನೆಯನ್ನು ಸೇರಿಸಿ ಪ್ರತಿಭಟನೆ ಮಾಡುತ್ತೆವೆ. ಜೀವಂತ ಇರುವ ವ್ಯಕ್ತಿಗೆ ಶ್ರದ್ದಾಂಜಲಿ ಹಾಕುವ ತುಚ್ಚ ಮನ್ನಸ್ಸಿಗೆ ನಮ್ಮ ದಿಕ್ಕಾರವೆಂದು ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ಅವರು ಪತ್ರಿಕಾ ಹೇಳಿಕೆಗೆ ತಿಳಿಸಿದ್ದಾರೆ.





