ಬಂಟ್ವಾಳ: ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದ ಪೊನ್ನಂಗಿಲ- ಮಂಡಾಡಿ ಬಂಟ್ವಾಳ ತಾಲೂಕು ಇಲ್ಲಿ ಈ ಭಾರೀ ರಾಜೇಶ್ ಗುರುಸ್ವಾಮಿಯವರ ನೇತೃತ್ವದಲ್ಲಿ ಜ. 11ರಂದು ಪೊನ್ನಂಗಿಲದಲ್ಲಿರುವ ಬೀರಿಯಲ್ಲಿ ದ್ವಿತೀಯ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ದೀಪಾರಾಧನೆ ಮತ್ತು ಇರುಮುಡಿ ಕಟ್ಟುವುದು ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ವಿಧಿ-ವಿಧಾನಗಳು ನಡೆಯಲಿದೆ.

ಬೆಳಗ್ಗೆ ಗಂಟೆ 7 ಕ್ಕೆ ಗಣಹೋಮ, ಬೆಳಗ್ಗೆ ಗಂಟೆ 9 ರಿಂದ ಶ್ರೀ ದುರ್ಗಾಂಬಾ ಭಜನಾ ಮಂಡಳಿ ಹಾಗೂ ಮಾತಾ ಭಜಕ ಮಂಡಳಿ ಮಂಡಾಡಿ ಇವರಿಂದ ಭಜನಾ ಸೇವೆ. ಬೆಳಗ್ಗೆ ಗಂಟೆ 11 ರಿಂದ ಅಯ್ಯಪ್ಪ ಸ್ವಾಮಿಯ ವೃತಧಾರಿಗಳ ಇರುಮುಡಿ ಕಟ್ಟುವ ಕಾರ್ಯಕ್ರಮ. ಅಯ್ಯಪ್ಪ ಸ್ವಾಮಿಗೆ ಮಹಾಪೂಜೆಯ ಮಹಾಮಂಗಳಾರತಿ. ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ ಪ್ರಸಾದ ಮತ್ತು ಅನ್ನಸಂತರ್ಪಣೆ ನಡೆಯಲಿದೆ.

ಜೊತೆಗೆ ಅನ್ನದಾನಕ್ಕೆ ಸಹಾಯ ಮಾಡುವವರು ಬೀರಿಯಲ್ಲಿ 3 ದಿನ ಮುಂಚೆ ತಿಳಿಸುವುದರ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಈ ಧಾರ್ಮಿಕ ಸೇವೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದ ಪೊನ್ನಂಗಿಲ- ಮಂಡಾಡಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.




