Breaking
24 Jun 2026, Wed

ಮಹಿಳೆಯೋರ್ವರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆಯೊಡ್ಡಿದ ಆರೋಪ, ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಕಾರ್ಕಳ: ಮಹಿಳೆಯೋರ್ವರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆಯೊಡ್ಡಿದ ಆರೋಪದ ಮೇಲೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಕ್ಕುಂದೂರಿನ ತಾಹಿರ ಬಾನು (44)ಅವರ ಮನೆಯ ಅಂಗಳಕ್ಕೆ ಶಿಫಾ ಫಾತಿಮಾ, ಅನೀಕ್ ಮತ್ತು ಜೈನಬ ಇವರು ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆಯೊಡ್ಡಿ, ಮನೆಯ ಬಾಗಿಲಿಗೆ ಒದ್ದು, ಕಿಟಕಿ ಗಾಜು ಮತ್ತು ದ್ವಿಚಕ್ರ ವಾಹನವನ್ನು ರಾಡ್ ಮತ್ತು ಕಲ್ಲಿನಿಂದ ಹಾನಿ ಮಾಡಿ ರೂ. 60,000/- ನಷ್ಟವನ್ನುಂಟು ಮಾಡಿರುತ್ತಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *