ಬಂಟ್ವಾಳ: ದ್ವಿಚಕ್ರ ವಾಹನವೊದು ಸ್ಕಿಡ್ ಆಗಿ ಸವಾರ ಹಾಗೂ ಸಹಸವಾರ ಗಾಯಗೊಂಡ ಘಟನೆ ವಿಟ್ಲ ವ್ಯಾಪ್ತಿಯ ಅಳಿಕೆ ಗ್ರಾಮದ ಅಡಲ ಎಂಬಲ್ಲಿ ನಡೆದಿದೆ.
ಅಳಿಕೆ ಬಿಟ್ಟಿಮೂಲೆ ನಿವಾಸಿ ಜಯರಾಮ (44) ಮತ್ತು ಅವರ ಪುತ್ರ ನಿಖಿಲ್ (10) ಗಾಯಾಳುಗಳು ಎಂದು ತಿಳಿದು ಬಂದಿದೆ. ಇಬ್ಬರಿಗೂ ತಲೆ ಮತ್ತು ಕೈಗಳಿಗೆ ಗಾಯಗಳಾಗಿದ್ದು, ಸ್ಥಳೀಯರು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಪೈಪ್ಲೈನ್ ಅಳವಡಿಸಲು ಸುಮಾರು ಒಂದು ವಾರದ ಹಿಂದೆ ರಸ್ತೆಯ ಬದಿಯಲ್ಲಿ ಗುಂಡಿ ತೆಗೆಯಲಾಗಿತ್ತು.
ಕಾಮಗಾರಿಗಾಗಿ ತೆಗೆದ ಮಣ್ಣನ್ನು ರಸ್ತೆಯ ಅರ್ಧ ಭಾಗದವರೆಗೆ ಹಾಕಲಾಗಿತ್ತು. ಬೈಕ್ ಸವಾರರು ಈ ಮಣ್ಣಿನ ಮೇಲೆ ಸಂಚರಿಸುವಾಗ ವಾಹನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.




