ಬಂಟ್ವಾಳ : ತಾಲೂಕಿನ ನರಿಕೊಂಬು ಗ್ರಾಮದ ನಿಶಾನಿ ಡ್ಯಾನ್ಸ್ ಗ್ರೂಪ್ ನರಿಕೊಂಬು, ಇದರ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಜ. 4 ರಂದು ಶ್ರೀ ಮಹಮ್ಮಾಯಿ ಸನ್ನಿಧಿ ಅಬ್ಬೆಯಮಜಲಿನಲ್ಲಿ ಬಿಡುಗಡೆಗೊಂಡಿತು.

ಈ ಸಂದರ್ಭದಲ್ಲಿ ಭಗೀರಥ ಮೊಗರ್ನಾಡ್, ನಿಶಾನಿ ಡ್ಯಾನ್ಸ್ ಗ್ರೂಪ್ ನ ವ್ಯವಸ್ಥಾಪಕರಾದ ದಿನೇಶ್ ಅಮೀನ್ ನಾಟಿ, ನೃತ್ಯ ಸಂಯೋಜಕಿ ಕುಮಾರಿ ನಿಶಾನಿ, ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರಾದ ಯತೀಶ್ ಶೆಟ್ಟಿ, ಸಮಿತಿ ಸದಸ್ಯರುಗಳಾದ ರಮೇಶ್ ದೋಟ, ಉದಯ ಶೆಟ್ಟಿ, ನಿತಿನ್ ಶೆಟ್ಟಿ, ರಾಘವೇಂದ್ರ ಕಾರಂತ್, ತಂಡದ ನೃತ್ಯ ಕಲಾವಿದರು ಹಾಗೂ ಪೋಷಕರು ಉಪಸ್ಥಿತರಿದ್ದರು.





