Breaking
23 Mar 2026, Mon

ಮೂಡಬಿದಿರೆಯ ಯುವತಿ ಗುರುಪುರ ನದಿಗೆ ಹಾರಿ ಆತ್ಮಹತ್ಯೆ

ಮಂಗಳೂರು: ಯುವತಿಯೊಬ್ಬಳು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ಹೊರವಲಯದ ಗುರುಪುರದಲ್ಲಿ ಜ.5 ರಂದು ನಡೆದಿದೆ.

ಮೂಡಬಿದಿರೆಯ ಗಾಂಧಿನಗರ ನಿವಾಸಿ ಅಲಂಕಾರ್ ಟೆಕ್ಸ್ ಟೈಲ್ಸ್ ನ ಉದ್ಯೋಗಿ ನವ್ಯ ಎಂಬಾಕೆ ಇಂದು ಮಧ್ಯಾಹ್ನದ ವೇಳೆ ಗುರುಪುರದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾಳೆ.

ಮೃತ ನವ್ಯಳೊಂದಿಗೆ ನಿಡ್ಡೋಡಿ ಮೂಲದ ಮತ್ತೋರ್ವಳು ಯುವತಿ ಕೂಡಾ ಇದ್ದಳೆನ್ನಲಾಗಿದ್ದು ಈ ಘಟನೆಗೆ ಕಾರಣವೇನೆಂದು ಇನ್ನಷ್ಟೇ ತಿಳಿದು ಬರಬೇಕಿದೆ. ಗುರುಪುರದಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಅವರಿಗೆ ಈ ಘಟನೆ ಬಗ್ಗೆ ಗೊತ್ತಾಗಿ ಕೂಡಲೇ ತಮ್ಮ ಬೆಂಬಲಿಗರೊಂದಿಗೆ ಶವ ಮೇಲಕ್ಕೆತ್ತಲು ಬೇಕಾದ ವ್ಯವಸ್ಥೆ ಮಾಡುತ್ತಿದ್ದಾರೆ.

ಬಜ್ಪೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *