Breaking
25 Sep 2026, Fri

ಬಡಗುತಿಟ್ಟಿನ ಕಡತೋಕಾ ಲಕ್ಷ್ಮೀನಾರಾಯಣ ಭಾಗವತರು ಇನ್ನಿಲ್ಲ

ಉತ್ತರ ಕನ್ನಡ : ಬಡಗುತಿಟ್ಟು ಮೇಳಗಳ ಪ್ರಖ್ಯಾತ ಭಾಗವತರಾದ ಕಡತೋಕಾ ಲಕ್ಷ್ಮೀನಾರಾಯಣ ಭಾಗವತರು(98) ನಿಧನರಾಗಿದ್ದಾರೆ.

ಯಕ್ಷಗಾನ ಲೋಕದ ಸವ್ಯಸಾಚಿ ಮಂಜುನಾಥ ಭಾಗವತರ ಹಿರಿಯ ಅಣ್ಣನಾಗಿದ್ದ ಕಡತೋಕಾ ಲಕ್ಷ್ಮೀನಾರಾಯಣ ಭಾಗವತರು ವೃತ್ತಿಯಿಂದ ಕಡತೋಕಾ ಸಹಕಾರಿ ಸಂಘದ ಕಾರ್ಯದರ್ಶಿಯಾಗಿದ್ದರು. ಕರ್ಕಿ ಮೇಳದ ಭಾಗವತರಾಗಿ, ಭಾಗವತಿಕೆ ಶಿಕ್ಷಕರಾಗಿ, 50 ವರ್ಷಕ್ಕೂ ಅಧಿಕ ಕಾಲ ದುಡಿದಿದ್ದ ಇವರು, ಜಿಲ್ಲೆಯ ಸಾಂಪ್ರಾದಾಯಿಕ ಯಕ್ಷಗಾನ ಭಾಗವತಿಕೆಯ ಗುರುವಾಗಿದ್ದರು.

ತೀರಾ ಇತ್ತೀಚಿನವರೆಗೆ ಭಾಗವತಿಕೆ ಮಾಡುತ್ತಿದ್ದರು. ಇವರ ನಿಧನಕ್ಕೆ ಯಕ್ಷಗಾನ ಕಲಾವಿದರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *