Breaking
25 Sep 2026, Fri

ಕಲ್ಮಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ: ಶಾಸಕರ ಅಪಾರ ಕೊಡುಗೆ

ಬೆಳ್ತಂಗಡಿ: ಶತಮಾನೋತ್ಸವವನ್ನು ಆಚರಿಸುತ್ತಿರುವ ಕಲ್ಮಂಜ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಸಕರಾದ ಹರೀಶ್ ಪೂಂಜರವರಿಂದ ಅನುದಾನಗಳ ಸಂಗ್ರಹಿತ ಕೊಡುಗೆ ನೀಡಿದರು.

ಶಾಲೆಯ ಮೇಲ್ಛಾವಣಿ ದುರಸ್ತಿಗೆ ರೂ. 2 ಲಕ್ಷ, ಆಟದ ಮೈದಾನ ವಿಸ್ತರಣೆಗೆ ರೂ. 5 ಲಕ್ಷ, ಸರಕಾರಿ ಪ್ರೌಢಶಾಲೆಗೆ ನೂತನ ಕೊಠಡಿ ನಿರ್ಮಾಣಕ್ಕೆ ರೂ. 17.15 ಲಕ್ಷ, ಸಭಾಂಗಣಕ್ಕೆ ಟೈಲ್ಸ್ ಅಳವಡಿಕೆಗೂ ರೂ. 5 ಲಕ್ಷ ಹಾಗೂ ನಿಡಿಗಲ್ ಅಂಗನವಾಡಿ ಕೇಂದ್ರಕ್ಕೆ ನೂತನ ಕಟ್ಟಡ ನಿರ್ಮಾಣಕ್ಕೆ ರೂ. 17 ಲಕ್ಷ ಅನುದಾನ ನೀಡಲಾಗಿದ್ದು, ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಮಹತ್ತರ ನೆರವು ನೀಡಿದ್ದಾರೆ.

ಶತಮಾನೋತ್ಸವ ಸಮಿತಿ, ಶಾಲಾಭಿವೃದ್ಧಿ ಸಮಿತಿ, ಹಳೆಯ ವಿದ್ಯಾರ್ಥಿ ಸಂಘ, ಅಧ್ಯಾಪಕ ವೃಂದ ಮತ್ತು ವಿದ್ಯಾಭಿಮಾನಿಗಳ ಪರವಾಗಿ ಶಾಸಕರಿಗೆ ಹೃದಯಸ್ಪರ್ಶಿ ಅಭಿನಂದನೆ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *