ಬಂಟ್ವಾಳ: ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಮಂಚಕಲ್ಲು ಸಿದ್ದಕಟ್ಟೆ ಇವರ ಆಯೋಜನೆಯಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ವತಿಯಿಂದ ಅಂಚೆ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮವು ನಡೆಯಿತು.

ಈ ಕಾರ್ಯಕ್ರಮದಲ್ಲಿ ಆಧಾರ್ ನೋಂದಣಿ ತಿದ್ದುಪಡಿ 56, ಅಪಘಾತ ಹಾಗೂ ಆರೋಗ್ಯ ವಿಮೆ 38, ಸಣ್ಣ ಉಳಿತಾಯ ಯೋಜನೆಗಳು 26, ಒಟ್ಟು 120 ಕ್ಕಿಂತಲೂ ಹೆಚ್ಚಿನ ಅಂಚೆ ಸೇವಾ ಯೋಜನೆಗಳ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಂಡರು.

ಈ ಸಂದರ್ಭದಲ್ಲಿ ಆಯೋಜಕರಿಗೆ ಹಾಗೂ ಅಂಚೆ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಪುತ್ತೂರು ವಿಭಾಗದ ವತಿಯಿಂದ ಧನ್ಯವಾದಗಳನ್ನು ಸಲ್ಲಿಸಲಾಯಿತು.



