Breaking
23 Dec 2024, Mon

ಕಂಬಳಬೆಟ್ಟು ಧರ್ಮನಗರ ಮಲರಾಯ ಜೇರ ಬ್ರಹ್ಮಕಲಶ:ನ.17ರಂದು ಚಪ್ಪರ ಮುಹೂರ್ತ

ವಿಟ್ಲ: ಕಂಬಳಬೆಟ್ಟು ಧರ್ಮನಗರ ಮಲರಾಯ ಜೇರದಲ್ಲಿ ಡಿಸೆಂಬರ್ ತಿಂಗಳು ನಡೆಯಲಿರುವ ವೈದ್ಯನಾಥ ಮಲರಾಯ ಸಪರಿವಾರ ದೈವಗಳ ದೈವಸ್ಥಾನದ ಸಾನಿಧ್ಯ ವೃದ್ಧಿ ಬ್ರಹ್ಮಕಲಶ ಅಭಿಷೇಕ ಮತ್ತು ನೇಮೋತ್ಸವದ ಅಂಗವಾಗಿ ನ. 17
ಭಾನುವಾರದಂದು ಚಪ್ಪರ ಮಹೂರ್ತ ಪೂರ್ವಾಹ್ನ ನಡೆಯಲಿದೆ ಎಂದು ಬ್ರಹ್ಮಕಲಶ ಸ್ವಾಗತ ಸಮಿತಿಯ ಅಧ್ಯಕ್ಷ. ಮೂಡಾಯಿಮಾರು ಸತೀಶ್ ಶೆಟ್ಟಿ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ದೀಪ ಪ್ರಜ್ವಲನೆ ಮಾಡಲಿದ್ದಾರೆ ಎಂದರು‌
ಸತೀಶ್ ಶೆಟ್ಟಿ ಮೂಡಾಯಿಮಾರು ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಜತಾದ್ರಿ ಚಾಮುಂಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಕೃಷ್ಣಪ್ಪ ಪೂಜಾರಿ, ಪಿಲಿಂಜ ನಡುಮನೆ ಮಲರಾಯ ದೈವಸ್ಥಾನದ ಅಧ್ಯಕ್ಷ ಹಡೀಲು ಸೇಸಪ್ಪ ಗೌಡ ಚಪ್ಪರ ಮುಹೂರ್ತಕ್ಕೆ ಚಾಲನೆ ನೀಡುವರು. ತೋರಣ ಮುಹೂರ್ತಕ್ಕೆ ಕುಂಡಡ್ಕ ನಾರಾಯಣ ಶೆಟ್ಟಿ, ಅಮೈ ಬಾಲಕೃಷ್ಣ ಗೌಡ, ಮಿತ್ತೂರು ರಮೇಶ ಭಟ್ , ಕಾರ್ಯಾಡಿಗುತ್ತು ಜಯರಾಮ ಪೂಜಾರಿ ಚಾಲನೆ ನೀಡುವರು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು‌ ಎಂದು ತಿಳಿಸಿದರು. ಚಪ್ಪರ ಮುಹೂರ್ತ ದಂದು ಒಂದೂವರೆ ಸಾವಿರದಷ್ಟು ಜನ ಸೇರುವ ನಿರೀಕ್ಷೆ ಇದೆ ಎಂದರು.

ಡಿ. 21ರಿಂದ 25 ರ ತನಕ ವೈದ್ಯನಾಥ, ಮಲರಾಯ ಸಪರಿವಾರ ದೈವಗಳ ಸಾನ್ನಿಧ್ಯವೃದ್ಧಿ ಬ್ರಹ್ಮಕಲಶಾಭಿಷೇಕ ಮತ್ತು ನೇಮೋತ್ಸವ ಜರಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶ ಸ್ವಾಗತ ಸಮಿತಿ ಅಧ್ಯಕ್ಷ ಅಮೈ ವಸಂತ ಕುಮಾರ್, ಉಪಾಧ್ಯಕ್ಷ ಬೀಡಿನಮಜಲು ಸುಧಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮೋಹನ್ ಕೆ. ಎಸ್. ಉರಿಮಜಲು, ಸಂಘಟನಾ ಕಾರ್ಯದರ್ಶಿ ಮಹಾಬಲ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *