Breaking
25 Sep 2026, Fri

ಬಡ್ಡಕಟ್ಟೆ: ಜ.6 ರಂದು ಪ್ರತಿಷ್ಠಾ ವರ್ಧಂತಿ ಉತ್ಸವ

ಬಂಟ್ವಾಳ: ಬಡ್ಡಕಟ್ಟೆ ಶ್ರೀ ನಿತ್ಯಾನಂದ ಗೋವಿಂದ ಸ್ವಾಮಿ ಭಜನಾ ಮಂದಿರದಲ್ಲಿ ಸದ್ಗುರು ಶ್ರೀ ನಿತ್ಯಾನಂದ ಸ್ವಾಮೀಜಿ ಅವರ 34 ನೇ ವರ್ಷ ಮತ್ತು ಸದ್ಗುರು ಶ್ರೀ ಗೋವಿಂದ ಸ್ವಾಮೀಜಿ ಅವರ 17 ನೇ ವರ್ಷದ ವಿಗ್ರಹ ಪ್ರತಿಷ್ಠಾ ವರ್ಧಂತಿ ಉತ್ಸವವು ಜ.6 ರಂದು ನಡೆಯಲಿದೆ.

ಉತ್ಸವವು ಬೆಳಿಗ್ಗೆ 7.30 ಕ್ಕೆ ಆರಂಭವಾಗಲಿದ್ದು ಬೆಳಿಗ್ಗೆ 8 ರಿಂದ 10 ರ ತನಕ ಸ್ವಾಮೀಜಿದ್ವಯರ ಪಂಚಲೋಹದ ವಿಗ್ರಹಕ್ಕೆ ಭಕ್ತರಿಂದ ಸ್ವತಃ ಸೀಯಾಳಾಭಿಷೇಕ ನಡೆಯಲಿದೆ.

ಮಧ್ಯಾಹ್ನ 12 ಗಂಟೆಗೆ ಭಜನೆ ಸಹಿತ ಮಹಾಪೂಜೆ, 1 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಸಂಜೆ 5 ಗಂಟೆ ಬಳಿಕ ರಜತ ಪಲ್ಲಕಿಯಲ್ಲಿ ಉತ್ಸವ ಮೂರ್ತಿ ಮೆರವಣಿಗೆ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಬಿ.ಯೋಗೀಶ ಸಪಲ್ಯ ತಿಳಿಸಿದ್ದಾರೆ.

Leave a Reply

Your email address will not be published. Required fields are marked *