Breaking
26 Sep 2026, Sat

ಸಮಾಜ ಸೇವಕ,ಲೇಖಕ ಸಿರಾಜ್ ಮಲ್ಪೆ ನಿಧನ

ಉಡುಪಿ: ಸಮಾಜ ಸೇವಕ, ಲೇಖಕರಾಗಿರುವ ಸಿರಾಜ್ ಮಲ್ಪೆ ಅವರು ಮಣಿಪಾಲ ಆಸ್ಪತ್ರೆಯಲ್ಲಿ ಜ.2 ರಂದು ನಿಧನರಾಗಿದ್ದಾರೆ.

ಸಿರಾಜ್ ಅವರು ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯ ಮಲ್ಪೆ ಶಾಖೆಯ ಅಧ್ಯಕ್ಷರಾಗಿದ್ದರು. ಅವರು ಸಕ್ರಿಯ ಸಮಾಜ ಸೇವಕರಾಗಿದ್ದು, ಸಮುದಾಯ ಕಲ್ಯಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಅವರು ಲೇಖಕರಾಗಿದ್ದರು. ಅನುಗ್ರಹ ಟ್ರಸ್ಟ್ ನ ಸದಸ್ಯರು ಕೂಡ ಆಗಿದ್ದರು.

ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *