Breaking
26 Sep 2026, Sat

ಅಪರಿಚಿತರಿಂದ ಮಹಿಳೆಗೆ ಕಿರುಕುಳ

ಬಂಟ್ವಾಳ : ಮನೆಯೊಂದಕ್ಕೆ ನಾಲ್ವರು ಅಪರಿಚಿತರ ಗುಂಪೊಂದು ಬಂದು ಬೆದರಿಸಿ ಮಾನಸಿಕ ಕಿರುಕುಳ ನೀಡಿದ ಘಟನೆ ಡಿ . 31 ರಂದು ಕರಿಯಂಗಳ ಗ್ರಾಮದ ಕಲ್ಕುಟ ಎಂಬಲ್ಲಿ ನಡೆದಿದೆ.

ನಾಲ್ವರು ಅಪರಿಚಿತರ ಗುಂಪೊಂದು ಡಿ. 31 ರಂದು ಅಧಿಕಾರಿಗಳ ಸೋಗಿನಲ್ಲಿ ಮಹಿಳೆಯ ಮನೆಗೆ ಬಂದಿದ್ದು, ಈ ಮನೆ ಮೇಲೆ ಬ್ಯಾಂಕ್ ಸಾಲ ಇದೆ ಜಪ್ತಿ ಮಾಡುತ್ತೇವೆ ಎಂದು ಸುಳ್ಳು ಹೇಳಿ ಮಾನಸಿಕ ಕಿರುಕುಳ ನೀಡಿದ್ದಾರೆ.

ಈ ಆರೋಪಿಗಳ ವಿರುದ್ಧ ಮಹಿಳೆಯು ದೂರು ನೀಡಿದ್ದು . ದೂರಿನ ಆಧಾರದಂತೆ ಆರೋಪಿಗಳಾದ ವಿಜಯ್ ಫೆರ್ನಾಂಡಿಸ್ ಹಾಗೂ ಇತರ ಮೂವರ ವಿರುದ್ಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ಪ್ರಕರಣ ದಾಖಲಾಗಿದೆ.

ಏಕಾಏಕಿ ಮನೆಯ ನಿವೇಶನ ಸರ್ವೇ ನಡೆಸಿದ ಸರ್ವೇ ನಡೆಸಲು ಆರಂಭಿಸಿದ್ದು, ಮಹಿಳೆಯು ಗಾಬರಿಗೊಂಡು ಬೊಬ್ಬೆ ಹಾಕಿದಾಗ ನೆರೆ ಹೊರೆಯವರು ಬರುವುದನ್ನು ಕಂಡು ಅಪರಿಚಿತರು ಸ್ಥಳದಿಂದ ಪರಾರಿಯಾಗಿದ್ದಾರೆ.

ಈ ಘಟನೆಯಿಂದ ಅಸ್ವಸ್ಥರಾಗಿದ್ದ ಮಹಿಳೆಯನ್ನು ನೆರೆಹೊರೆಯವರು ತಕ್ಷಣವೇ ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *