Breaking
22 Mar 2026, Sun

ಮೊಬೈಲ್ ಚಾರ್ಜ್ ಹಾಕುವ ವೇಳೆ ಶಾರ್ಟ್ ಸರ್ಕ್ಯೂಟ್: ಹೊತ್ತಿ ಉರಿದ ಮನೆಯ ಬೆಡ್ ರೂಂ

ಕಾಸರಗೋಡು: ಮೊಬೈಲ್ ಚಾರ್ಜ್ ಹಾಕುವ ವೇಳೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಮನೆಯ ಬೆಡ್ ರೂಂ ಸಂಪೂರ್ಣವಾಗಿ ಹೊತ್ತಿ ಉರಿದ ಘಟನೆ ಉಳಿಯತ್ತಡ್ಕ ಭಗವತಿ ನಗರದಲ್ಲಿ ಡಿ. 31 ರಂದು ನಡೆದಿದೆ.

ಡಿ. 31 ರಂದು ರಾತ್ರಿ ಚಿತ್ರ ಕುಮಾರಿ ಎಂಬವರ ಮನೆಯಲ್ಲಿ ಮೊಬೈಲ್‌ ಚಾರ್ಜ್‌ ಹಾಕುವ ವೇಳೆ ಈ ಅವಘಡ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಬೆಂಕಿಯಿಂದ ಕೋಣೆಯಲ್ಲಿರಿಸಿದ್ದ ಕಪಾಟು, ಮೇಜು, ಮಂಚ, ಹಾಸಿಗೆ, ಉಡುಪು ಸಹಿತ ಬೆಲೆ ಬಾಳುವ ವಸ್ತುಗಳು ಹೊತ್ತಿ ಉರಿದಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *