ಬಂಟ್ವಾಳ: ತಾಲೂಕಿನ ಕರ್ಪೆ ಯಕ್ಷಾಭಿಮಾನಿ ಬಳಗದ ವತಿಯಿಂದ ಪಾವಂಜೆ ಮೇಳದ ಯಕ್ಷಗಾನ ಬಯಲಾಟ ಕಾರ್ಯಕ್ರಮವು ಡಿ. 30 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯಶಿಕ್ಷಕ ಕೆ. ನಾರಾಯಣ ನಾಯಕ್ ಕರ್ಪೆ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪಾವಂಜೆ ಮೇಳದ ವ್ಯವಸ್ಥಾಪಕಾರದ ಸತೀಶ್ ಶೆಟ್ಟಿ ಪಟ್ಲಾ, ಸಿದ್ದಕಟ್ಟೆ ಸಿ. ಎ. ಬ್ಯಾಂಕ್ ಅಧ್ಯಕ್ಷ ಪ್ರಭಾಕರ ಪ್ರಭು, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ದೇವಪ್ಪ ಕರ್ಕೇರ, ಮೇಳದ ಭಾಗವತರಾದ ಭರತ್ ರಾಜ್ ಶೆಟ್ಟಿ, ಪ್ರಮುಖರಾದ ಅನಂತ ಪವನಾಸ್ಕರ್ ದೋಟ, ವಾಮನ ಬುಣ್ಣನ್, ಸುಭ್ರಮಣ್ಯ ಭಟ್,ಶಶಿಧರ ಪ್ರಭು ದೋಟ,ದಾಮೋದರ ಪೂಜಾರಿ ಹಾಗೂ ಯಕ್ಷಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು





