Breaking
19 Sep 2026, Sat

ಕರುನಾಡು ಚಾರಿಟೇಬಲ್ ಟ್ರಸ್ಟ್ (ರಿ.) ಕರ್ನಾಟಕ: 2ನೇ ಮಾಸಿಕ ಸೇವಾ ಹಸ್ತಾಂತರ

ಬಂಟ್ವಾಳ: ಸೇವಾ ಮನೋಭಾವನೆಯೊಂದಿಗೆ ಹಾಗೂ ಸಮಾಜದ ಅಶಕ್ತ ಕುಟುಂಬಕ್ಕೆ ನೆರವಾಗುವ ಉದ್ದೇಶದೊಂದಿಗೆ ಕರುನಾಡು ಚಾರಿಟೇಬಲ್ ಟ್ರಸ್ಟ್ (ರಿ.) ಕರ್ನಾಟಕ ತನ್ನ 2ನೇ ಮಾಸಿಕ ಸೇವಾಧನವನ್ನು ಹಸ್ತಾಂತರಿಸಿದೆ.

ಬಾಯಿಯ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುವ ಕಾರ್ಕಳ ತಾಲೂಕಿನ ಬೆಳುವಾಯಿ ಗ್ರಾಮದ ಕಾನ ಬ್ರಹ್ಮ ಸ್ಥಾನ ಎಂಬಲ್ಲಿನ ಆನಂದ ಇವರ ಚಿಕಿತ್ಸೆಗೆ 10,000ರೂ.ಗಳ ಚೆಕ್ ನ್ನು ಡಿ.29ರಂದು ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *