Breaking
22 Mar 2026, Sun

ನಾಪತ್ತೆಯಾದ ವ್ಯಕ್ತಿ ನದಿಯಲ್ಲಿ ಶವವಾಗಿ ಪತ್ತೆ

ಬೆಳ್ತಂಗಡಿ : ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಬೆಳಾಲು ಗ್ರಾಮದ ಬಲಿಪೆ ನೇತ್ರಾವತಿ ನದಿಯಲ್ಲಿ ಪತ್ತೆಯಾದ ಘಟನೆ ಡಿ.30 ರಂದು ನಡೆದಿದೆ.

ಬೆಳಾಲು ಪುರುಷರಬೆಟ್ಟು ನಿವಾಸಿ ರಾಜೇಶ್ ಪಿ. (30) ಮೃತಪಟ್ಟ ದುರ್ದೈವಿ.

ಡಿ. 27ರಂದು ಬೆಳಿಗ್ಗೆ ಮನೆಯಿಂದ ಹೊರಟ ರಾಜೇಶ್ ಪಿ ಅವರು ಮನೆಗೆ ವಾಪಸ್ಸಾಗದೇ ನಾಪತ್ತೆಯಾಗಿದ್ದರು. ಮನೆಯವರು ಹಾಗೂ ಸ್ಥಳೀಯವರು ಎಷ್ಟೇ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿಲ್ಲ. ಈ ಕುರಿತು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದರು.

ಬಳಿಕ ತೀವ್ರ ಹುಡುಕಾಟ ನಡೆಸಿದಾಗ ಡಿ. 30 ರಂದು ಬೆಳಿಗ್ಗೆ ಬಲಿಪೆಯ ನೇತ್ರಾವತಿ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ.

Leave a Reply

Your email address will not be published. Required fields are marked *