ಬಂಟ್ವಾಳ: ದ.ಕ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ (ರಿ.), ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ.), ಹೆಗ್ಡೇಸ್ ಖಾಸಗಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ಕಾಯರ್‌ಪಲ್ಕೆ, ಮಣಿನಾಲ್ಕೂರು , ಕೆ.ಎಂ.ಸಿ ಆಸ್ಪತ್ರೆ ಅತ್ತಾವರ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಮಹಾದೇವಿ ಮಹಮ್ಮಾಯಿ ದೇವಸ್ಥಾನ, ಕೂಡಿಬೈಲು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಮಣಿನಾಲ್ಕೂರು ಒಕ್ಕೂಟ ಮತ್ತು ಸರಪಾಡಿ ವಲಯ ಶ್ರೀ ದುಗಲಾಯ ಮತ್ತು ಕೊಡಮಣಿತ್ತಾಯ ಹಾಗೂ ಪರಿವಾರ ದೈವಗಳ ಸೇವಾ ಪ್ರತಿಷ್ಠಾನ (ರಿ.) ಪೆರಿಯಪಾದೆ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಬಜ, ಶ್ರೀ ಪಿಲಿಚಾಮುಂಡಿ ಹಾಗೂ ಪರಿವಾರ ದೈವಗಳ ಸೇವಾ ಪ್ರತಿಷ್ಠಾನ (ರಿ.) ಬಲಯೂರು, ಜೈ ಕರ್ನಾಟಕ ಪೆರಿಯಪಾದೆ, ಶ್ರೀ ಮಹಮ್ಮಾಯಿ ಫ್ರೆಂಡ್ಸ್ ಮುನ್ನಲಾಯಿ ಪದವು, ಶ್ರೀ ರಕೇಶ್ವರಿ ಫ್ರೆಂಡ್ಸ್ ವಚ್ಚಾರು, ನಮ್ಮನೆ ಚಾರಿಟೇಬಲ್ ಟ್ರಸ್ಟ್ (ಆಶ್ರಮ) ಮಿನಾಲ್ದೊಟ್ಟು ಕಾಯರ್ ಪಲ್ಕೆ, ಶ್ರೀ ಮಹಮ್ಮಾಯಿ ಕ್ರಿಕೇಟರ್ಸ್ ಕೂಡಿಬೈಲು , ಅಂಗನವಾಡಿ ಕೇಂದ್ರ ಮುನ್ನಲಾಯಿ ಪದವು, ಅಂಗನವಾಡಿ ಕೇಂದ್ರ ಮಾವಿನಕಟ್ಟೆ, ಶ್ರೀ ರಾಮ ಭಜನಾ ಮಂದಿರ (ರಿ.) ಮಾವಿನಕಟ್ಟೆ ಇವರ ಸಹಯೋಗದಲ್ಲಿ ಡಿ. 28 ರಂದು ಉಚಿತ ಆರೋಗ್ಯ ತಪಾಸನಾ ಶಿಬಿರವು ಹೆಗ್ಡೇಸ್ ಆಂಗ್ಲ ಮಾದ್ಯಮ ಖಾಸಗಿ ಹಿರಿಯ ಶಾಲಾ ವಠಾರದಲ್ಲಿ ನಡೆಯಲಿದೆ.

ಶಿಬಿರದಲ್ಲಿ ಸಾಮಾನ್ಯ ರೋಗ ವಿಭಾಗ, ಎಲುಬು ಮತ್ತು ಕೀಲು ರೋಗ ವಿಭಾಗ, ಕಿವಿ ಮೂಗು ಮತ್ತು ಗಂಟಲು ವಿಭಾಗ, ಕಣ್ಣಿನ ವಿಭಾಗ, ಮಕ್ಕಳ ವಿಭಾಗ, ಬಿ.ಪಿ ಹಾಗೂ ಮಧುಮೇಹ ತಪಾಸಣೆ ವ್ಯವಸ್ಥೆ ಇರಲಿದೆ.
ರಿಯಾಯಿತಿ ದರದಲ್ಲಿ ಓದುವ ಕನ್ನಡಕಗಳು ಲಭ್ಯವಿರುವುದರೊಂದಿಗೆ ಉಚಿತ ಔಷಧಿ ವಿತರಣೆಯೂ ನಡೆಯಲಿದೆ.
ಈ ಉಚಿತ ಆರೋಗ್ಯ ತಪಾಸನಾ ಶಿಬಿರದಲ್ಲಿ ಸದಸ್ಯರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





