ಗುರುವಾಯನಕೆರೆ: ಎಕ್ಸೆಲ್ ಖಾಸಗಿ ವಿದ್ಯಾಸಂಸ್ಥೆಯು ಅಕ್ರಮವಾಗಿ ನಿರ್ಮಿಸುತ್ತಿದ್ದ ಕಟ್ಟಡಕ್ಕೆ ಇಂದು(ಡಿ. 26) ತಡೆ ನೀಡಲಾಗಿದೆ.
ಈ ಕುರಿತು ಇತ್ತೀಚೆಗೆ ಕುವೆಟ್ಟು ಜನಸ್ಪಂದನಾ ಸಭೆಯಲ್ಲಿ ಗ್ರಾಮಸ್ಥರು ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದರು. ಅಧಿಕಾರಿಗಳ ನಿರ್ಲಕ್ಷಕ್ಕೆ ಗದ್ದಲವೇ ಉಂಟಾಗಿತ್ತು. ಈ ಜನಸ್ಪಂದನ ಸಭೆಯ ಫಲವಾಗಿ ತಾಲೂಕು ಆಡಳಿತ ತಹಶೀಲ್ದಾರ್ ಅವರ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಅಕ್ರಮ ಕಟ್ಟಡ ನಿರ್ಮಾಣಕ್ಕೆ ತಡೆ ನೀಡಲಾಗಿದೆ.





