Breaking
26 Sep 2026, Sat

ನದಿಗೆ ಹಾರಿ ಆತ್ಮಹತ್ಯೆ: ಲತೀಶ್ ಪೂಜಾರಿ ಮೃತದೇಹ ಪತ್ತೆ

ಮೂಡುಬಿದಿರೆ : ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮದ ಲತೀಶ್ ಪೂಜಾರಿ ( 42) ಎಂಬವರ ಮೃತದೇಹ ಡಿ.24ರ ಸಂಜೆ ನೆತ್ತೋಡಿ ಎಂಬಲ್ಲಿ ಪತ್ತೆಯಾಗಿದೆ.

ಇತ್ತೀಚೆಗಷ್ಟೇ ವಿದೇಶದಿಂದ ಊರಿಗೆ ಬಂದಿದ್ದ ಇವರು ಅಲ್ಲಿಂದ ಹೊಸಂಗಡಿಯಲ್ಲಿರುವ ತನ್ನ ಪತ್ನಿಯ ಮನೆಗೆ ಬಂದಿದ್ದರೆನ್ನಲಾಗಿದೆ.

ಭಾನುವಾರ ಯಾವುದೋ ವಿಷಯಕ್ಕೆ ಜಗಳ ನಡೆದಿದ್ದು ಈ ಬಗ್ಗೆ ಮಿಯ್ಯಾರಿನಲ್ಲಿರುವ ತನ್ನ ಅಣ್ಣನ ಮೊಬೈಲ್ ಗೆ ಮೆಸೇಜ್ ಮಾಡಿ ಹೇಳಿಕೊಂಡಿದ್ದರಂತೆ. ಅವರು, ʼಜಗಳದ ವಿಚಾರ ಸರಿಮಾಡುವ, ಆತುರದ ನಿರ್ಧಾರ ಬೇಡ’ ಎಂದು ಬುದ್ಧಿಮಾತು ಹೇಳಿದ್ದರೆನ್ನಲಾಗಿದೆ. ಆದರೂ ಲತೀಶ್‌ ಹೊಸಂಗಡಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ಧಾರೆ ಎಂದು ತಿಳಿದು ಬಂದಿದೆ.

ವೇಣೂರು ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *