ವಿಟ್ಲ: ಕಂಬಳಬೆಟ್ಟು ಮುಖ್ಯ ರಸ್ತೆಗೆ ಒಮ್ಮಿಂದೊಮ್ಮೆಲೆ ನುಗ್ಗಿದ ಬೈಕನ್ನು ತಪ್ಪಿಸುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಬೈಕ್ ಗಳಿಗೆ ಡಿಕ್ಕಿಯಾಗಿ ಮಣ್ಣಿನ ದಿಬ್ಬದ ಮೇಲೆ ಮಗುಚಿ ಬಿದ್ದಿದ್ದು, ಬೈಕ್ ಸವಾರ ಅರ್ಕೆಜಾಲು ನಿವಾಸಿ ಯತೀಶ ಗಾಯಗೊಂಡಿದ್ದಾರೆ. ಕಾರು ಚಾಲಕ ಬೊಳಂತಿಮೊಗರು ನಿವಾಸಿ ಸನನ್ ಅಪಾಯದಿಂದ ಪಾರಾಗಿದ್ದಾರೆ.
ವಿಟ್ಲ ಕಬಕ ರಸ್ತೆಯ ಕಂಬಳಬೆಟ್ಟುವಿನಲ್ಲಿ ಅರ್ಕೆಜಾಲು ಒಳ ರಸ್ತೆಯಿಂದ ಮುಖ್ಯ ರಸ್ತೆಗೆ ನುಗ್ಗಿದ ಬೈಕ್ ಗೆ ನಿಯಂತ್ರಣ ಕಳೆದುಕೊಂಡ ಕಾರು ಡಿಕ್ಕಿಯಾಗಿದೆ. ಬೈಕ್ ಚರಂಡಿಗೆ ಬಿದ್ದಿದ್ದು, ಕಾರು ರಸ್ತೆಯ ಮತ್ತೊಂದು ಭಾಗದಲ್ಲಿ ನಿಲ್ಲಿಸಿದ್ದ ಬೈಕ್ ಗೆ ಡಿಕ್ಕಿಯಾಗಿ ಮಣ್ಣಿನ ದಿಬ್ಬದ ಮೇಲೆ ಮಗುಚಿ ಬಿದ್ದಿದೆ.
ಗಾಯಗೊಂಡ ಬೈಕ್ ಸವಾರನನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಜಖಂ
ಗೊಂಡಿದ್ದು ಚಾಲಕನನ್ನು ರಕ್ಷಿಸಲಾಗಿದೆ.