ಹೊಕ್ಕಾಡಿಗೋಳಿ: ಇಂಟರ್ಲಾಕ್ ಸಾಗಿಸುತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಅಂಗಡಿಗೆ ನುಗ್ಗಿದ ಘಟನೆ ಎಲಿಯನಡುಗೋಡು ಗ್ರಾಮದ ಹೊಕ್ಕಾಡಿಗೋಳಿಯಲ್ಲಿ ನಡೆದಿದೆ.
ಲಾರಿಯು ಮೂಡಬಿದ್ರಿಯಿಂದ -ಹೊಕ್ಕಾಡಿಗೋಳಿಗೆ ಇಂಟರ್ಲಾಕ್ ಸಾಗಿಸುತಿತ್ತು ಎಂದು ತಿಳಿದು ಬಂದಿದೆ.
ಅಂಗಡಿಯು ರಾಜು ಶೆಟ್ಟಿ ಎಂಬವರಿಗೆ ಸೇರಿದ್ದು ಅವರು ಯಾವುದೇ ಪ್ರಾಣಪಾಯವಿಲ್ಲದೆ ಬಚಾವಾಗಿದ್ದರೆ. ಚಾಲಕನೂ ಸಣ್ಣ ಪುಟ್ಟ ಗಾಯಗಳೊಂದಿಗೆ ಬಚಾವಾಗಿದ್ದು, ಅಂಗಡಿ ಸಂಪೂರ್ಣ ಜಖoಗೊಂಡಿದೆ.ಸಧ್ಯ ಲಾರಿ ತೆರವು ಕಾರ್ಯ ನಡೆಯುತ್ತಿದ್ದು ತನಿಖೆಯ ನಂತರವೇ ಇನ್ನಷ್ಟು ಮಾಹಿತಿ ಹೊರಬೀಳಬೇಕಿದೆ.