ಬಂಟ್ವಾಳ :ಗ್ರಾಮ ವಿಕಾಸ ಪ್ರತಿಷ್ಠಾನ ಹಾಗೂ ಶ್ರೀ ಶನೈಶ್ಚರ ಪೂಜಾ ಸೇವಾ ಸಮಿತಿ, ನೆತ್ತರಕೆರೆ ಇದರ ಅಶ್ರಯದಲ್ಲಿ ನ. 23 ರಿಂದ ನ.30ರ ವರೆಗೆ ನಡೆಯುವ ಸಾಮೂಹಿಕ ಎಳ್ಳುಗಂಟು ದೀಪೋತ್ಸವ ಹಾಗೂ ಸಾಮೂಹಿಕ ಶ್ರೀ ಶನೈಶ್ಚರ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ನ 10ರಂದು ಭಾನುವಾರ ನೆತ್ತರಕೆರೆಯ ಭಜನಾ ಮಂದಿರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮ ವಿಕಾಸ ಪ್ರತಿಷ್ಠಾನದ ಸಂಯೋಜಕ ಸಂತೋಷ್ ಕುಮಾರ್ ನೆತ್ತರಕೆರೆ ಸಾಮೂಹಿಕ ,ಶ್ರೀ ಶನೈಶ್ಚರ ಪೂಜಾ ಸೇವಾ ಸಮಿತಿಯ ಅಧ್ಯಕ್ಷ ರಘುನಾಥ ಸಪಲ್ಯ ಹೊಳ್ಳರಬೈಲು, ಕಾರ್ಯದರ್ಶಿ ವಿದ್ಯಾರಾಜ್ ಕಾಪಿಕಾಡ್, ಕೋಶಾಧಿಕಾರಿ ರವಿ ಯು ಜಿ ನವೋದಯ ಮಿತ್ರ ಕಲಾ ವೃಂದದ ಗೌರವಧ್ಯಕ್ಷ ಪಿ ಸುಬ್ರಮಣ್ಯ ರಾವ್, ಸಂಚಾಲಕ ದಾಮೋದರ ನೆತ್ತರಕೆರೆ,ನೇತ್ರಾವತಿ ಮಾತೃ ಮಂಡಳಿಯ ಸಂಚಾಲಕಿ ಲಲಿತ ಸುಂದರ್, ಅಧ್ಯಕ್ಷೆ ಮಾಲತಿ ಚಂದ್ರಹಾಸ ಸಹಿತ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.