Breaking
23 Dec 2024, Mon

5 ಗ್ಯಾರಂಟಿ ಕೊಡಿ ಅಂತ ಜನ ಕೇಳಿದ್ರಾ?: ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಪ್ರಶ್ನೆ

ರಾಮನಗರ: 5 ಗ್ಯಾರಂಟಿ ಕೊಡಿ ಅಂತ ಜನ ಕೇಳಿದ್ರಾ? ಹಾಲಿನ ಬೆಂಬಲ ಬೆಲೆ ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡಿದ್ದಾರೆ. ಕೋವಿಡ್‌ 2ನೇ ಹಂತದಲ್ಲಿ ರಾಮನಗರ ಚನ್ನಪಟ್ಟಣದಲ್ಲಿ ಪ್ರತಿ ಕುಟುಂಬಕ್ಕೆ ಕುಮಾರಣ್ಣ ಅವರು ರೇಷನ್ ಕಿಟ್ ಹಂಚಿದ್ರು. ಕಾಂಗ್ರೆಸ್ ನಾಯಕರು ಮಹದೇವಪ್ಪ ನಿಂಗೂ ಫ್ರೀ… ಕಾಕಾ ಪಾಟೀಲ್ ನಿನಗೂ ಫ್ರೀ… ಕಾಂಗ್ರೆಸ್ಸನ್ನು ನಂಬಿದರೆ ಏನಾಗುತ್ತೆ ಅನ್ನೋದಕ್ಕೆ ಜನರಿಗೆ ಇದೊಂದು ಅದ್ಭುತ ಪಾಠ ಎಂದು ಚನ್ನಪಟ್ಟಣ ಎನ್‌ಡಿಎ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಕಿಡಿಕಾರಿದರು.

2 ಚುನಾವಣೆಗಳಲ್ಲಿ ನನ್ನನ್ನ ಕುತಂತ್ರದಿಂದ ಸೋಲಿಸಿದ್ರು. ರಾಮನಗರದಲ್ಲಿ ಗಿಫ್ಟ್ ಕೊಟ್ಟಿ ಸೋಲಿಸಿದ್ರು. ಈಗಲೂ ರಾತ್ರಿ 4 ಗಂಟೆಗೆ ಬಂದು ಕೂಪನ್ ಕೊಡಬಹುದು. ರೆಷನ್ ಕಾರ್ಡ್ ಕೂಪನ್ ಕೊಡ್ತಾರೆ, ಇದು ಕಾಂಗ್ರೆಸ್ ನಾಯಕರ ಗಿಫ್ಟಾ? ನನಗೆ ಈಗ ಒಂದು ಅವಕಾಶ ಕೊಡಿ ಎಂದು ನಿಖಿಲ್‌ ಮನವಿ ಮಾಡಿದರು.

ನೀರಾವರಿ ಯೋಜನೆಗೆ ಭದ್ರಬುನಾದಿ ಹಾಕಿರೋದು ಮಾಜಿ ಪ್ರಧಾನಿ ದೇವೇಗೌಡರು. ಸತ್ಯಗಾಲ‌ ಮಂಚಿನಬೇಲಿ ಸೇರಿದಂತೆ ಹಲವು ಹಳ್ಳಿಗಳಿಗೆ ಶಾಶ್ವತ ನೀರಾವರಿ ಯೋಜನೆ ಮಾಡಬೇಕಂತ ಕುಮಾರಸ್ವಾಮಿ ಅವರನ್ನ ಆಯ್ಕೆ ಮಾಡಿದರು. ಅದಕ್ಕಾಗಿಯೇ ಕುಮಾರಣ್ಣ ಅವರು ರಾಮನಗರಕ್ಕೆ ರಾಜೀನಾಮೆ ಕೊಟ್ಟು ಚನ್ನಪಟ್ಟಣ ಉಳಿಸಿಕೊಂಡರು ಎಂದರು.

Leave a Reply

Your email address will not be published. Required fields are marked *