Breaking
21 Jun 2026, Sun

ಅನ್ನಪಾಡಿಯ ಶ್ರೀ ಬಾಲ ಗಣಪತಿ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಬ್ರಹ್ಮಶ್ರೀ ನೀಲೇಶ್ವರ ಕೆ ಉಚ್ಚಿಲ ತಾಯ ಪದ್ಮನಾಭ ತಂತ್ರಿ ಅವರಿಗೆ ಗೌರವ ಪೂರ್ವಕ ಆಹ್ವಾನ

ಬಂಟ್ವಾಳ: ಸಜೀಪ ಮೂಡದ ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನಪಾಡಿಯಲ್ಲಿ ನಡೆಯಲಿರುವ ಶ್ರೀ ಬಾಲ ಗಣಪತಿ ಮೂಲ ಮಂತ್ರ, ಲಕ್ಷ ಜಪ ಯಜ್ಞ ದೂರ್ವ ಹೋಮ ಪ್ರತಿಷ್ಠಾ ವರ್ಧಂತಿ, ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರವನ್ನು ಬ್ರಹ್ಮಶ್ರೀ ನೀಲೇಶ್ವರ ಕೆ ಉಚ್ಚಿಲ ತಾಯ ಪದ್ಮನಾಭ ತಂತ್ರಿಗಳನ್ನು ಭೇಟಿ ಮಾಡಿ ಗೌರವ ಪೂರ್ವಕವಾಗಿ ಆಹ್ವಾನಿಸಲಾಯಿತು.

ಈ ಸಂದರ್ಭದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಆಡಳಿತ ಸಮಿತಿ ಅಧ್ಯಕ್ಷ ಯಶವಂತ ದೇರಾಜೆ ಗುತ್ತು, ಲಿಂಗಪ್ಪ ಧೋಟ, ಸುರೇಶ್ ಬಂಗೇರ, ಭಾಸ್ಕರ, ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *