Breaking
6 May 2026, Wed

100 ಕ್ಕೂ ಹೆಚ್ಚು ಹೆರಿಗೆ ಕಾರ್ಯ ಮಾಡಿ ಸಮಾಜದಲ್ಲಿ ಗುರುತಿಸಿಕೊಂಡಿದ್ದ ಶತಾಯುಷಿ ನೀಲಮ್ಮ ನಿಧನ

ಬೆಳ್ತಂಗಡಿ: ಮೊಗ್ರು ಗ್ರಾಮದ ದಂಡುಗ ನಿವಾಸಿ ದಿ. ಸೋಮಪ್ಪರವರ ಪತ್ನಿ ಶತಾಯುಷಿ ನೀಲಮ್ಮ(ವ. 102) ಅವರು ವಯೋಸಹಜ ಕಾರಣದಿಂದ ಡಿ. 17 ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ನೀಲಮ್ಮ ಅವರು 100 ಕ್ಕೂ ಹೆಚ್ಚು ಹೆರಿಗೆ ಕಾರ್ಯ ಮಾಡಿ ಸಮಾಜದಲ್ಲಿ ಗುರುತಿಸಿಕೊಂಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರು ಇವರ ಕಾರ್ಯವನ್ನು ಮೆಚ್ಚಿ ಮೋದಿಜಿಯ ಆಡಳಿತ ಚುಕ್ಕಾಣಿ ಹಿಡಿದು 8 ನೇ ವರ್ಷದ ಸಂಭ್ರಮದ ಅಂಗವಾಗಿ ಸೇವೆ ಸುಶಾಸನ ಬಡವರ ಕಲ್ಯಾಣ ಎನ್ನುವ ಕಾರ್ಯಕ್ರಮವನ್ನು ನೀಲಮ್ಮ ಅವರಿಂದ ನೆರವೇರಿಸಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಸನ್ಮಾನಿಸಿದ್ದರು.

ಮೃತರು ಪುತ್ರರು, ಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *