ಬೆಳ್ತಂಗಡಿ: ವಿಶ್ವ ಹಿಂದೂ ಪರಿಷತ್ ಭಜರಂಗದಳ, ಪದ್ಮುಂಜ ಘಟಕ ಇದರ ನೂತನ ಸಮಿತಿಯ ರಚನೆಯು ಪದ್ಮುಂಜ ಸಿಎ ಬ್ಯಾಂಕ್ ನ ಸಭಾಂಗಣದಲ್ಲಿ ನಡೆಯಿತು.

ಈ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ಗೌರವ ಅಧ್ಯಕ್ಷರಾಗಿ ದಿನೇಶ್ ಶೆಟ್ಟಿ ಮಲೆಂಗಲ್ಲು , ಅಧ್ಯಕ್ಷರಾಗಿ ಪ್ರದೀಪ್ ಶೆಟ್ಟಿ ಮಲೆಂಗಲ್ಲು, ಉಪಾಧ್ಯಕ್ಷರಾಗಿ ರಾಮಕೃಷ್ಣ ಶೆಟ್ಟಿ ಕೊಲ್ಲೊಟ್ಟು, ಸಂಚಾಲಕರಾಗಿ ರಂಜಿತ್ ಮನಿಯಣಿ, ಸಹ ಸಂಚಾಲಕರಾಗಿ ಭರತೇಶ್ ಕೊಲಚ್ಚವು ಹಾಗೂ ಪುರಂದರ ಗೌಡ, ಕಾರ್ಯದರ್ಶಿಯಾಗಿ ಚರಣ್ ಅಂತರ , ಸಹ ಕಾರ್ಯದರ್ಶಿಯಾಗಿ ಸುನಿಲ್ ಕುಮಾರ್, ಕೋಶಾಧಿಕಾರಿಯಾಗಿ ಗೋಪಾಲ್ ಗೌಡ ಅವರನ್ನು ನೇಮಕ ಮಾಡಲಾಯಿತು.

ಸೇವಾ ಪ್ರಮುಖರಾಗಿ ಕೃಷ್ಣ ನಾಯ್ಕ ವಳಬಾವು ಹಾಗೂ ಚಂದನ್, ಗೋ ರಕ್ಷಕ್ ಪ್ರಮುಖರಾಗಿ ಹರೀಶ್ ನೆಕ್ಕೀಲು ಹಾಗೂ ಪುರುಷೋತ್ತಮ ಗೌಡ, ಸತ್ಸಂಗ್ ಪ್ರಮುಖರಾಗಿ ವಿಠಲ್ ಶೆಟ್ಟಿ ಕೊಲ್ಲೊಟ್ಟು ಹಾಗೂ ಪ್ರೇಮನಾಥ್ ಶೆಟ್ಟಿ ಮಲೆಂಗಲ್ಲು ಸಾಪ್ತಾಯಿಕ ಮಿಲನಾಗಿ ವಿನೋದ್ ಕೆ ಪುಣ್ಕೆದಡಿ, ಪ್ರಚಾರ ಪ್ರಮುಖರಾಗಿ ವಿಜಯ್ ಎಮ್ ಆರ್ ಹಾಗೂ ಸನತ್ ಜೋಗಿ, ಗೌರವ ಸಲಹೆಗಾರರಾಗಿ ಸೀತಾರಾಮ ಮಡಿವಾಳ ಹಾಗೂ ಯತೀಶ್ ಶೆಟ್ಟಿ ಪಣೆಕ್ಕರ, ಸದಾಶಿವ ಶೆಟ್ಟಿ ಜೋಗಿ, ರಮೇಶ್ ನಾಲೋಡಿ, ವಸಂತ ಮೊಗೆರೋಡಿ, ತಿಮ್ಮಪ್ಪ ಗೌಡ ಅವರನ್ನು ಆಯ್ಕೆಮಾಡಲಾಯಿತು.

ಈ ಸಂದರ್ಭದಲ್ಲಿ ಉಪ್ಪಿನಂಗಡಿ ಪ್ರಖಂಡದ ಕಾರ್ಯದರ್ಶಿ ರಾಜಶೇಖರ ರೈ , ಸೇವಾ ಪ್ರಮುಖ್ ರಾಜೇಶ್ ಅಡೆಂಜ,ಸಾಪ್ತಾಯಿಕ ಮಿಲನ್ ಭರತ್ ಅಡೆಂಜ ರವರು ಉಪಸ್ಥಿತರಿದ್ದರು.




