Breaking
23 Mar 2026, Mon

ಪುರುಷರ ಹಾಗೂ ಮಹಿಳೆಯರ ಮುಕ್ತ ಸಿಂಗಲ್ ಗ್ರಿಪ್ ಮಾದರಿಯ ಹಗ್ಗಜಗ್ಗಾಟ ಹಾಗೂ ಮಹಿಳೆಯ ಮುಕ್ತ ತ್ರೋಬಾಲ್ ಪಂದ್ಯಾಟ ಹಾಗೂ ವಿಜೇತರಿಗೆ ಬಹುಮಾನ ವಿತರಣೆ

ಬೆಳ್ತಂಗಡಿ : ಡಿ.14 ಶಿವಫ್ರೆಂಡ್ಸ್ ಕುರಾಯ – ಖಂಡಿಗ ಮೈರೋಳ್ತಡ್ಕ -ಬಂದಾರು ಗ್ರಾಮ, ಇದರ ಆಶ್ರಯದಲ್ಲಿ ತಾಲೂಕು ವಾಲಿಬಾಲ್ ಅಸೋಶಿಯೇಷನ್ ಬೆಳ್ತಂಗಡಿ ಇದರ ಸಹಯೋಗದೊಂದಿಗೆ 10ನೇ ವರ್ಷದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ, ಪುರುಷರ ಹಾಗೂ ಮಹಿಳೆಯರ ಮುಕ್ತ ಸಿಂಗಲ್ ಗ್ರಿಪ್ ಮಾದರಿಯ ಹಗ್ಗಜಗ್ಗಾಟ ಹಾಗೂ ಮಹಿಳೆಯ ಮುಕ್ತ ತ್ರೋಬಾಲ್ ಪಂದ್ಯಾಟದಲ್ಲಿ ವಿಜೇತರಿಗೆ ಡಿ.14 ರಂದು ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.

ಮಹಿಳೆಯರ ತ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ವಿಮಲ ಬಳಗ, ದ್ವಿತೀಯ ಸ್ಥಾನ ರಕ್ಷಿತಾ ಬಳಗ ಪಡೆದುಕೊಂಡಿತು. ಮಹಿಳೆಯರ ಮುಕ್ತ ಸಿಂಗಲ್ ಗ್ರಿಪ್ ಮಾದರಿಯ ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನ ಪರಶುರಾಮ ಫ್ರೆಂಡ್ಸ್ ಉದನೆ, ದ್ವಿತೀಯ ಸ್ಥಾನ ಶಿವಫ್ರೆಂಡ್ಸ್ ಹಾಗೂ ತೃತೀಯ ಸ್ಥಾನವನ್ನು ಸತ್ಯದೇವತೆ ಪಾರೆಂಕಿ, ಚತುರ್ಥ ಸ್ಥಾನವನ್ನು ಶ್ರೀ ಸಾಯಿ ಬಂದಾರು ಪಡೆದುಕೊಂಡಿತು.

ಪುರುಷರ ಮುಕ್ತ ಸಿಂಗಲ್ ಗ್ರಿಪ್ ಮಾದರಿಯ ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನ ಶ್ರೀ ದುರ್ಗಾ ಕೊರಗಟ್ಟೆ, ದ್ವಿತೀಯ ಸ್ಥಾನ ಶ್ರೀ ಸಾಯಿ ಮೊಗ್ರು -ಬಂದಾರು, ತೃತೀಯ ಸ್ಥಾನವನ್ನು ಫ್ರೆಂಡ್ಸ್ ಪಣೋಲಿಬೈಲು, ಚತುರ್ಥ ಸ್ಥಾನವನ್ನು ಪರಶುರಾಮ ಉದನೆ ಪಡೆದುಕೊಂಡಿತು.

ತಾಲೂಕು ಮಟ್ಟದ ವಾಲಿಬಾಲ್ ನಲ್ಲಿ ಪ್ರಥಮ ಸ್ಥಾನ ಸಂತೃಪ್ತಿ ಫ್ರೆಂಡ್ಸ್ ಗುರುವಾಯನಕೆರೆ, ದ್ವಿತೀಯ ಸ್ಥಾನವನ್ನು ಶಿವಫ್ರೆಂಡ್ಸ್ ಕುರಾಯ ಖಂಡಿಗ ಬಂದಾರು, ತೃತೀಯ ಸ್ಥಾನವನ್ನು ಕಣಿಯೂರು ಫ್ರೆಂಡ್ಸ್ , ಚತುರ್ಥ ಸ್ಥಾನವನ್ನು ಯಜಮಾನ ಫ್ರೆಂಡ್ಸ್ ಹಾಗೂ ಬೆಸ್ಟ್ ಪಾಸಾರ್ ಚರಣ್ ಸಂತೃಪ್ತಿ ಫ್ರೆಂಡ್ಸ್ ಗುರುವಾಯನಕೆರೆ, ಬೆಸ್ಟ್ ಅಟ್ಯಾಕರ್ ಅಖಿಲೇಶ್ ಸಂತೃಪ್ತಿ ಗುರುವಾಯನಕೆರೆ, ಬೆಸ್ಟ್ ಆಲ್ ರೌಂಡರ್ ವೈಯಕ್ತಿಕ ಪ್ರಶಸ್ತಿ ತನ್ನದಾಗಿಸಿಕೊಂಡರು.

Leave a Reply

Your email address will not be published. Required fields are marked *