Breaking
23 Mar 2026, Mon

ಸುಳ್ಯದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಲಕ್ಷ ರೂ. ಮೌಲ್ಯದ ಮರದ ದಿಮ್ಮಿಗಳು ವಶಕ್ಕೆ

ಸುಳ್ಯ: ದೇವಚಳ್ಳ ಗ್ರಾಮದ ಮುಂಡೋಡಿಯಲ್ಲಿ ಅಕ್ರಮವಾಗಿ ಕಡಿದು ಸಾಗಿಸುತ್ತಿದ್ದ ಅಂದಾಜು 10 ಲಕ್ಷ ರೂ. ಮೌಲ್ಯದ ಮರದ ದಿಮ್ಮಿಗಳನ್ನು ಮತ್ತು ಸಾಗಾಟಕ್ಕೆ ಬಳಸಿದ ವಾಹನಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಡಿ.13 ರಂದು ವಶಕ್ಕೆ ಪಡೆದುಕೊಂಡಿದ್ದಾರೆ.

ಮುಂಡೋಡಿಯ ನಾಗೇಶ್ ಎಂಬುವವರಿಗೆ ಸೇರಿದ ಜಾಗದಿಂದ ಒಂದು ಹೆಬ್ಬಲಸಿನ ಮರ ಮತ್ತು ಒಂದು ಮಾವಿನ ಮರವನ್ನು ಅಕ್ರಮವಾಗಿ ಕಡಿದು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದಾಳಿ ನಡೆಸಿದ್ದಾರೆ.

ಈ ಸಂದರ್ಭ ಸ್ಥಳದಲ್ಲಿದ್ದ ಹಲಸು ಮತ್ತು ಮಾವಿನ ಮರದ 10 ದಿಮ್ಮಿಗಳ ಜೊತೆಗೆ ಮರದ ದಿಮ್ಮಿಗಳನ್ನು ಸಾಗಿಸಲು ಬಳಸಿದ ಲಾರಿ ಮತ್ತು ಕ್ರೇನ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಸ್ಥಳದ ಮಾಲಕ ನಾಗೇಶ್ ಮತ್ತು ಪ್ರಮುಖ ಆರೋಪಿ ಮರದ ವ್ಯಾಪಾರಿ ಮತ್ತು ಕ್ರೇನ್ ಮಾಲೀಕ, ಸುಳ್ಯ ಕಸಬಾ ನಾವೂರು ನಿವಾಸಿ ಮಹಮ್ಮದ್ ಅಶ್ರಫ್ ಡಿ. ಎಂ. ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ ಬಳಿಕ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *