Breaking
23 Dec 2024, Mon

ಕಾಲೇಜ್ ಬಸ್ಸು ಓವರ್ ಟೇಕ್ ಮಾಡುವ ಭರದಲ್ಲಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ-ಉದ್ರಿಕ್ತಗೊಂಡ ವಿದ್ಯಾರ್ಥಿಗಲಿಂದ ಬಸ್ಸಿನ ಗಾಜು ಒಡೆದು ಪ್ರತಿಭಟನೆ

ಮೂಡುಬಿದಿರೆ: ಕಾಲೇಜು ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರಿಗಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮವಾಗಿ ತಾಯಿ ಮತ್ತು ಮಗಳು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ತೋಡಾರಿನಲ್ಲಿ ನಡೆದಿದ್ದು ಈ ಸಂದರ್ಭ ಉದ್ರೀಕಗೊಂಡ ವಿದ್ಯಾರ್ಥಿಗಳು ಬಸ್ ನ ಗಾಜನ್ನು ಹೊಡೆದು ಧ್ವಂಸ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಮಾಸ್ಟರ್ ಎಂಬ ಹೆಸರಿನ ಖಾಸಗಿ ಬಸ್ಮೂ ಡುಬಿದಿರೆಯಿಂದ ಮಂಗಳೂರಿನತ್ತ ಹೋಗುವ ಸಂದರ್ಭದಲ್ಲಿ ತೋಡಾರ್ ಮೈಟ್ ಕಾಲೇಜ್ ಎದುರುಗಡೆ ಕಾಲೇಜ್ ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿ ಕಾಲೇಜ್ ಬಸ್ ಗೆ ಡಿಕ್ಕಿ ಹೊಡೆದು ಎದುರಿನಲ್ಲಿ ತಾಯಿ ಮತ್ತು ಮಗಳು ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ತಾಯಿಗೆ ಸ್ವಲ್ಪ ಗಾಯಗಳಾಗಿದ್ದು ಮಗಳಿಗೆ ಗಂಭೀರ ಗಾಯವಾಗಿದೆ. ಬಸ್ಸ್ ನ ಚಾಲಕ ತಪ್ಪಿಸಿಕೊಂಡಿದ್ದಾನೆ.

ಖಾಸಗಿ ಬಸ್ ಗಳು ರಭಸದ ಕಡಿವಾಣವಿಲ್ಲದೆ ಓಡಾಡುತ್ತಿದ್ದು ಈ ಬಗ್ಗೆ ಈಗಾಗಲೇ ಹಲವು ಪ್ರಕರಣಗಳು ನಡೆದಿವೆ. ಆದರೆ ಖಾಸಗಿ ಬಸ್ ನವರು ಇನ್ನೂ ಎಚ್ಚೆತ್ತುಕೊಂಡಂತೆ ಕಂಡು ಬರುತ್ತಿಲ್ಲ. ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ಭೇಟಿ ನೀಡಿ ಉದ್ರಿಕ್ತಗೊಂಡಿರುವ ವಿದ್ಯಾರ್ಥಿಗಳನ್ನು ಸಮಧಾನ ಪಡಿಸುತ್ತಿದ್ದಾರೆ. ವಿದ್ಯಾರ್ಥಿಗಳು ಬಸ್ಸಿನ ಓನರ್ ಸ್ಥಳಕ್ಕೆ ಆಗಮಿಸಬೇಕೆಂದು ಆಗ್ರಹಿಸಿ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.

Leave a Reply

Your email address will not be published. Required fields are marked *