ಪುತ್ತೂರು: ಒಂದೂವರೆ ವರ್ಷದ ಮಗು ತಾವರೆ ಬೆಳೆದ ನೀರಿನ ಟ್ಯಾಂಕ್‌ಗೆ ಬಿದ್ದು ಮೃತಪಟ್ಟ ಘಟನೆ ಪುತ್ತೂರಿನ ಬನ್ನೂರು ನೀರ್ಪಾಜೆಯಲ್ಲಿ ನಡೆದಿದೆ.

ಮನೆಯಂಗಳದಲ್ಲಿ ತಾಯಿ ಮಗುವಿಗೆ ಊಟ ಕೊಡುತ್ತಿದ್ದ ವೇಳೆ ಕ್ಷಣಕಾಲ ಮನೆಯೊಳಗೆ ಹೋಗಿ ಬರುತ್ತಿದ್ದಂತೆ ಮಗು ಕಾಣೆಯಾಗಿತ್ತು. ಬಳಿಕ ಮನೆಯಂಗಲದಲ್ಲಿ ಹುಡುಕಾಡಿದಾಗ ತಾವರೆ ಬೆಳೆದ ನೀರಿನ ಟ್ಯಾಂಕ್‌ಗೆ ಮಗು ಬಿದ್ದಿರುವುದು ಗಮನಕ್ಕೆ ಬಂದಿದೆ. ತಕ್ಷಣ ಮಗುವನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಾಗಲೇ ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ.





