Breaking
20 Sep 2026, Sun

ಸಜೀಪ ಮೂಡ ಅನ್ನಪಾಡಿ ಶ್ರೀ ಬಾಲ ಗಣಪತಿ ದೇವಸ್ಥಾನಕ್ಕೆ ಅಗತ್ಯವಾದ ಮುಂಭಾಗದ ಭೂಮಿ ಖರೀದಿ ಪ್ರಕ್ರಿಯೆಗೆ ಚಾಲನೆ

ಬಂಟ್ವಾಳ: ಸಜೀಪ ಮೂಡ ಅನ್ನಪಾಡಿಯ ಶ್ರೀ ಬಾಲ ಗಣಪತಿ ದೇವಸ್ಥಾನಕ್ಕೆ ಅಗತ್ಯವಾದ ಮುಂಭಾಗದ ಭೂಮಿ ಖರೀದಿ ಬಗ್ಗೆ ಬೂದಾನ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.

ಎನ್ ಕ್ಯೂಬ್ ಎಥಿಕಲ್ಸ್ ಪ್ರೈವೇಟ್ ಲಿಮಿಟೆಡ್, ಮುಂಬೈ ಇದರ ಉಪಾಧ್ಯಕ್ಷ ಜಿನರಾಜ ಪೂಜಾರಿ ದೇರಾಜೆ ಇವರಿಗೆ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಬೂದಾನದ ಕೂಪನ್ ಹಸ್ತಾಂತರಿಸುವ ಮೂಲಕ ಪ್ರಕ್ರಿಯೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಯಶವಂತ ದೇರಾಜೆ ಗುತ್ತು, ಪದಾಧಿಕಾರಿಗಳಾದ ಹರೀಶ್ ಬಂಗೇರ, ಲಿಂಗಪ್ಪ ಧೋಟ, ಸುರೇಶ್ ಬಂಗೇರ, ಭಾಸ್ಕರ್, ದಿನೇಶ್, ಮನೋಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *